ಅಖ್ಲಾಕ್‌ ಗುಂಪುಹತ್ಯೆ ಬಳಿಕ ನಿಷೇಧಾಜ್ಞೆ ಉಲ್ಲಂಘಿಸಿದ್ದ ಬಿಜೆಪಿ ನಾಯಕನಿಗೆ 800ರೂ. ದಂಡ ವಿಧಿಸಿದ ಕೋರ್ಟ್‌

Update: 2022-10-14 10:58 GMT
Photo: PTI

ಲಕ್ನೋ: ದಾದ್ರಿ ಎಂಬಲ್ಲಿ 2015 ರಲ್ಲಿ ನಡೆದ ಮೊಹಮ್ಮದ್‌ ಅಖ್ಲಾಕ್‌(Mohammad Akhlaq) ಗುಂಪು ಥಳಿತ, ಹತ್ಯೆ ಪ್ರಕರಣದ ನಂತರ ಅಖ್ಲಾಕ್‌ನ ಗ್ರಾಮವಾದ ಬಿಸಾಹ್ಡ ಎಂಬಲ್ಲಿ ಹೇರಲಾಗಿದ್ದ ನಿಷೇಧಾಜ್ಞೆಯನ್ನು ಉಲ್ಲಂಘಿಸಿದ್ದಕ್ಕಾಗಿ ಐಪಿಸಿ ಸೆಕ್ಷನ್‌ 188 ಅಡಿಯಲ್ಲಿ  ಬಿಜೆಪಿ ನಾಯಕ ಸಂಗೀತ್‌ ಸೋಮ್‌(Sangeet Som) ಅವರನ್ನು ಅಪರಾಧಿ ಎಂದು ಉತ್ತರ ಪ್ರದೇಶದ ಗೌತಮ್‌ ಬುದ್ಧ ನಗರದ ನ್ಯಾಯಾಲಯ ಘೋಷಿಸಿದೆ.

ಶಿಕ್ಷೆಯಾಗಿ ಅವರಿಗೆ ರೂ 800 ದಂಡವನ್ನು ಹೆಚ್ಚುವರಿ ಮುಖ್ಯ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ಪ್ರದೀಪ್‌ ಕುಮಾರ್‌ ಕುಶ್ವಾ ವಿಧಿಸಿದ್ದಾರೆ. ಈದ್‌ ಸಂದರ್ಭ ಗೋಮಾಂಸ ತಿಂದಿದ್ದೇ ಅಲ್ಲದೆ ನಂತರ ಸೇವನೆಗಾಗಿ ಅದನ್ನು ಸಂಗ್ರಹಿಸಿದ ಆರೋಪದ ಮೇಲೆ 2015 ರಲ್ಲಿ ಮುಹಮ್ಮದ್‌ ಅಖ್ಲಾಕ್‌ ಎಂಬಾತನನ್ನು ಗೌತಮ ಬುದ್ಧ್‌ ನಗರದ ದಾದ್ರಿ ಪ್ರದೇಶದಲ್ಲಿ ಗುಂಪೊಂದು ಥಳಿಸಿ ಹತ್ಯೆಗೈದಿತ್ತು.

ಘಟನೆ ನಂತರ ಸ್ಥಳೀಯಾಡಳಿತ ಸೆಕ್ಷನ್‌ 144 ಅನ್ವಯ ನಿಷೇಧಾಜ್ಞೆ ವಿಧಿಸಿದ್ದರೂ ಸೋಮ್‌ ಅವರು ಅದನ್ನು ಉಲ್ಲಂಘಿಸಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News