40 ದಿನಗಳ ಪರೋಲ್‌ ಮೂಲಕ ಜೈಲಿನಿಂದ ಹೊರಬಂದ ದೇರಾ ಮುಖ್ಯಸ್ಥ ಗುರ್ಮೀತ್‌ ಸಿಂಗ್

Update: 2022-10-14 17:15 GMT
Photo: PTI 

ಹೊಸದಿಲ್ಲಿ, ಅ. ೧೪: ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ದೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್‌(Gurmeet Ram Rahim Singh)ಗೆ ೪೦ ದಿನಗಳ ಪರೋಲ್ (ಜಾಮೀನು) ನೀಡಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ಪಿಟಿಐಗೆ ತಿಳಿಸಿದ್ದಾರೆ.
ನವೆಂಬರ್ ೩ರಂದು ನಡೆಯಲಿರುವ ಅದಮ್‌ಪುರ್ ಉಪ ಚುನಾವಣೆ ಮತ್ತು ನವೆಂಬರ್ ೧೨ರಂದು ನಡೆಯಲಿರುವ ಹರ್ಯಾಣ ಪಂಚಾಯತ್ ಚುನಾವಣೆಗಳ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಸಂಭವಿಸಿದೆ.


ತನ್ನ ಪಂಥದ ಮಾಜಿ ಮ್ಯಾನೇಜರ್ ಒಬ್ಬರನ್ನು ಕೊಲೆಗೈದ ಪ್ರಕರಣದಲ್ಲಿ ಸಿಂಗ್ ಮತ್ತು ಇತರ ನಾಲ್ವರು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ತನ್ನ ಇಬ್ಬರು ಅನುಯಾಯಿಗಳ ಮೇಲೆ ಅತ್ಯಾಚಾರಗೈದ ಪ್ರಕರಣದಲ್ಲಿ ಆತ ೨೦ ವರ್ಷಗಳ ಕಾರಾಗೃಹ ಶಿಕ್ಷೆಗೆ ಒಳಗಾಗಿದ್ದಾನೆ. ಆತನೀಗ ರೋಹ್ತಕ್‌ನ ಸುನಾರಿಯ ಜೈಲಿನಲ್ಲಿದ್ದಾನೆ.


ಆತನು ಪರೋಲ್ ಅವಧಿಯಲ್ಲಿ ಹರ್ಯಾಣದ ಸಿರ್ಸಾ ಅಥವಾ ರಾಜಸ್ಥಾನದಲ್ಲಿರುವ ದೇರಾದ ಆಶ್ರಮದಲ್ಲಿ ತಂಗುವ ನಿರೀಕ್ಷೆಯಿದೆ.
ಇದು ಈ ವರ್ಷ ಸಿಂಗ್‌ಗೆ ದೊರೆತ ಮೂರನೇ ಪರೋಲ್ ಆಗಿದೆ. ಜೂನ್‌ನಲ್ಲಿ ಆತನನ್ನು ಒಂದು ತಿಂಗಳ ಪರೋಲ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು. ಫೆಬ್ರವರಿಯಲ್ಲಿ, ಪಂಜಾಬ್ ಚುನಾವಣೆಗೆ ಪೂರ್ವಭಾವಿಯಾಗಿ ಅವನಿಗೆ ೨೧ ದಿನಗಳ ಪರೋಲ್ ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News