ವಿದೇಶಗಳಿಂದ ನನಗೂ ಬೆದರಿಕೆ ಕರೆಗಳು: ಶೋಭಾ ಕರಂದ್ಲಾಜೆ

Update: 2022-10-14 16:26 GMT

ಉಡುಪಿ: ಪಿಎಫ್‌ಐಗೆ ದೇಶಾದ್ಯಂತ ನಿಷೇಧ ಹೇರಿದ ಬಳಿಕ ನನಗೂ ವಿದೇಶಗಳಿಂದ ಬೆದರಿಕೆ ಕರೆಗಳು ಬರುತ್ತಿವೆ. ನಿಷೇಧದ ಬಳಿಕ ಪಿಎಫ್‌ಐ ಬೆಂಬಲಿಗರು ಹತಾಶರಾಗಿರುವುದನ್ನು ಇದು ತೋರಿಸುತ್ತದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಉಡುಪಿಯ ಹೊಟೇಲ್ ಕಿದಿಯೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅವರು ಈ ವಿಷಯ ತಿಳಿಸಿದರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರಿಗೆ ಮಂಗಳೂರಿನಲ್ಲಿ ಕೊಲೆ ಬೆದರಿಕೆ ಹಾಕಿದ್ದಾರೆನ್ನಲಾದ ಘಟನೆ ಹಿನ್ನೆಲೆಯಲ್ಲಿ ಕೇಳಿದ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.

ಹರೀಶ್ ಪೂಂಜಾರಿಗೆ ಬೆದರಿಕೆ ಹಾಕಿರುವ ಘಟನೆಯನ್ನು ತಾನು ಖಂಡಿಸುವುದಾಗಿ ಹೇಳಿದ ಅವರು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕೂಡಲೇ ಆರೋಪಿಗಳನ್ನು ಪೊಲೀಸರು ಬಂಧಿಸಬೇಕು ಎಂದರು.

ಬೆದರಿಕೆ ಕರೆಗಳು ನಮಗೂ ನಿರಂತರವಾಗಿ ಬರುತ್ತಿವೆ. ಹಿಂದುಗಳ ವಿಚಾರದಲ್ಲಿ ಮಾತನಾಡಿದಾಗಲೆಲ್ಲ ನಮಗೆ ಬೆದರಿಕೆ ಕರೆ ಬರುತ್ತಿರುತ್ತವೆ. ಇಂಟರ್ನೆಟ್ ಮೂಲಕ ಬರುವ ಕರೆಗಳನ್ನು ಪೊಲೀಸರಿಗೆ ಪತ್ತೆ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಬೆದರಿಕೆ ಕರೆಗಳಿಗೆಲ್ಲ ಬೆದರುವ ಜಾಯಮಾನ ನಮ್ಮದಲ್ಲ. ಭಯೋತ್ಪಾದಕರಿಗೆ ಮತ್ತು ಬೆಂಬಲಿಗರಿಗೆ ತಕ್ಕ ಶಾಸ್ತಿ ಆಗಬೇಕು. ಬೆದರಿಕೆ ಕರೆಗಳಿಗೆ ನಾವು ಬಗ್ಗುವರರೂ ಅಲ್ಲ, ಜಗ್ಗುವವರೂ ಅಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಶಾಸಕ ಹರೀಶ್ ಪೂಂಜಾ ಕಾರನ್ನು ಬೆನ್ನಟ್ಟಿದ ಪ್ರಕರಣ: ಆರೋಪಿ ವಶಕ್ಕೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News