×
Ad

ಶೀಘ್ರವೇ ಎಲ್ಲ ರಾಜ್ಯಗಳಲ್ಲಿ ನವಜಾತ ಶಿಶುಗಳಿಗೆ ಜನನ ಪ್ರಮಾಣಪತ್ರದ ಜೊತೆಗೆ ಆಧಾರ್ ಲಭ್ಯ

Update: 2022-10-15 21:11 IST

ಹೊಸದಿಲ್ಲಿ,ಅ.15: ಮುಂದಿನ ಕೆಲವು ತಿಂಗಳುಗಳಲ್ಲಿ ದೇಶದ ಎಲ್ಲ ರಾಜ್ಯಗಳಲ್ಲಿ ನವಜಾತ ಶಿಶುಗಳಿಗೆ(newborn baby) ಜನನ ಪ್ರಮಾಣಪತ್ರದ(Birth Certificate) ಜೊತೆಗೆ ಆಧಾರ್ ನೋಂದಣಿ (Aadhaar Enrollment ) ಸೌಲಭ್ಯವು ಲಭ್ಯವಾಗುವ ನಿರೀಕ್ಷೆಯಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ. ಪ್ರಸ್ತುತ 16 ರಾಜ್ಯಗಳು ಆಧಾರ್ನೊಂದಿಗೆ ಜೋಡಣೆಗೊಂಡಿರುವ ಜನನ ಪ್ರಮಾಣಪತ್ರಗಳನ್ನು ವಿತರಿಸುತ್ತಿವೆ. ಒಂದು ವರ್ಷಕ್ಕೂ ಈ ಪ್ರಕ್ರಿಯೆ ಆರಂಭಗೊಂಡಿದ್ದು,ಹಂತಹಂತವಾಗಿ ರಾಜ್ಯಗಳ ಸಂಖ್ಯೆಯನ್ನು ಹೆಚ್ಚಿಸಲಾಗಿತ್ತು.

ಇತರ ರಾಜ್ಯಗಳಿಗೆ ಸಂಬಂಧಿಸಿದಂತೆ ಕಾರ್ಯವು ಪ್ರಗತಿಯಲ್ಲಿದ್ದು, ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ)ವು ಈ ಸೌಲಭ್ಯ ಎಲ್ಲ ರಾಜ್ಯಗಳಿಗೆ ವಿಸ್ತರಣೆಯಾಗುವುದನ್ನು ನಿರೀಕ್ಷಿಸಿದೆ. ಇದು ಪೋಷಕರಿಗೆ ಹೆಚ್ಚಿನ ಅನುಕೂಲವನ್ನು ಒದಗಿಸಲಿದೆ.

ಐದು ವರ್ಷದೊಳಗಿನ ಮಕ್ಕಳ ಬಯೊಮೆಟ್ರಿಕ್ ವಿವರಗಳನ್ನು ಸಂಗ್ರಹಿಸಲಾಗುವುದಿಲ್ಲ, ಅವರ ಆಧಾರ್ ಅನ್ನು ಜನಸಂಖ್ಯಾ ಮಾಹಿತಿಯ ಆಧಾರದಲ್ಲಿ ಸಂಸ್ಕರಿಸಲಾಗುತ್ತದೆ ಮತ್ತು ಮುಖದ ಚಿತ್ರವನ್ನು ಹೆತ್ತವರ ಆಧಾರ್ ಜೊತೆ ಜೋಡಣೆ ಮಾಡಲಾಗುತ್ತದೆ. ಹೀಗಾಗಿ ಮಕ್ಕಳಿಗೆ ಐದು ವರ್ಷ ಮತ್ತು 15 ವರ್ಷಗಳು ತುಂಬಿದ ಬಳಿಕ ಬಯೊಮೆಟ್ರಿಕ್ನ ಅಪ್ಡೇಟ್ ಅಗತ್ಯವಾಗುತ್ತದೆ.

ದೇಶದಲ್ಲಿ ಈವರೆಗೆ 134 ಆಧಾರ್ ಕಾರ್ಡ್ಗಳನ್ನು ವಿತರಿಸಲಾಗಿದೆ.

ಜನನ ಸಮಯದಲ್ಲಿ ಜನನ ಪ್ರಮಾಣಪತ್ರದೊಂದಿಗೆ ಆಧಾರ್ ನೀಡಲಾಗುತ್ತದೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ಈಗಿನ ಗುರಿಯಾಗಿದೆ. ಈ ನಿಟ್ಟಿನಲ್ಲಿ ಯುಐಡಿಎಐ ಭಾರತದ ರಿಜಿಸ್ಟ್ರಾರ್ ಜನರಲ್ ಜೊತೆಗೂಡಿ ಕಾರ್ಯ ನಿರ್ವಹಿಸುತ್ತಿದೆ. ಪ್ರಕ್ರಿಯೆಗೆ ಜನನ ನೋಂದಣಿಗಳ ಗಣಕೀಕೃತ ವ್ಯವಸ್ಥೆಯ ಅಗತ್ಯವಿದೆ ಮತ್ತು ಸಂಪೂರ್ಣ ಗಣಕೀಕಕರಣ ಹೊಂದಿರುವ ರಾಜ್ಯಗಳನ್ನು ಯೋಜನೆಯ ವ್ಯಾಪ್ತಿಯಡಿ ತರಲಾಗಿದೆ ಎಂದು ಮೂಲಗಳು ತಿಳಿಸಿದವು.

ಜನನ ಪ್ರಮಾಣಪತ್ರಗಳು ಆಧಾರ್ನೊಂದಿಗೆ ಜೋಡಣೆಗೊಂಡಿರುವ ರಾಜ್ಯಗಳ ಸಂಪೂರ್ಣ ಪಟ್ಟಿ ತಕ್ಷಣಕ್ಕೆ ಲಭ್ಯವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News