ಬಾಲಕಿಯ ಅತ್ಯಾಚಾರ ಪ್ರಕರಣ ಸಂತ್ರಸ್ತೆಯ ವಿವಾಹದ ಷರತ್ತಿನೊಂದಿಗೆ ಆರೋಪಿಗೆ ಜಾಮೀನು
ಅಲಹಾಬಾದ್, ಅ. 15: ಅತ್ಯಾಚಾರ ಸಂತ್ರಸ್ತೆ ಬಾಲಕಿಯನ್ನು ವಿವಾಹವಾಗಬೇಕು ಹಾಗೂ ಆಕೆಯ ಹೆಣ್ಣು ಮಗುವನ್ನು ಪುತ್ರಿಯಾಗಿ ಸ್ವೀಕರಿಸಬೇಕು ಎಂಬ ಷರತ್ತಿನೊಂದಿಗೆ ಪ್ರಕರಣದ ಆರೋಪಿಗೆ ಅಲಹಾಬಾದ್ ಉಚ್ಚ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಪುತ್ರಿಯನ್ನು ವಿವಾಹವಾದರೆ ಹಾಗೂ ವಿವಾಹವನ್ನು ನೋಂದಣಿ ಮಾಡಿದರೆ ಆರೋಪಿಗೆ ಜಾಮೀನು ನೀಡುವುದಕ್ಕೆ ಬಾಲಕಿ (ಈಗ ವಯಸ್ಕಳಾಗಿದ್ದಾಳೆ)ಯ ತಂದೆಗೆ ಯಾವುದೇ ಅಭ್ಯಂತರ ಇಲ್ಲ ಎಂಬುದನ್ನು ನ್ಯಾಯಮೂರ್ತಿ ದಿನೇಶ್ ಕುಮಾರ್ ಸಿಂಗ್ ಅಕ್ಟೋಬರ್ 10ರ ತನ್ನ ಆದೇಶದಲ್ಲಿ ಅಭಿಪ್ರಾಯಿಸಿದ್ದಾರೆ.
ಉತ್ತರಪ್ರದೇಶದ ಖೇರಿ ಜಿಲ್ಲೆಯ ನಿವಾಸಿಯ ವಿರುದ್ಧ ಬಾಲಕಿಯ ಅಪಹರಣ, ಅತ್ಯಾಚಾರ ಪ್ರಕರಣ ಹಾಗೂ ಪೋಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಬಾಲಕಿಗೆ 17 ವರ್ಷವಿದ್ದಾಗ ಮಾರ್ಚ್ನಲ್ಲಿ ಅತ್ಯಾಚಾರ ಎಸಗಲಾಗಿದೆ ಎಂದು ಪ್ರಥಮ ಮಾಹಿತಿ ವರದಿ ತಿಳಿಸಿತ್ತು.
ಪ್ರಕರಣದ ವಿಚಾರಣೆ ಸಂದರ್ಭ ಆರೋಪಿ ಪರ ವಕೀಲ, ನನ್ನ ಕಕ್ಷಿದಾರ ಆಕೆಯೊಂದಿಗೆ ಪ್ರೇಮ ಸಂಬAಧ ಹೊಂದಿದ್ದುದರಿAದ ವಿವಾಹವಾಗಲು ಬಯಸಿದ್ದಾನೆ. ಅವರಿಬ್ಬರೂ ವಿವಾಹವಾಗಲು ಪರಾರಿಯಾಗಿದ್ದರು ಎಂದು ತಿಳಿಸಿದರು.
ಸಂತ್ರಸ್ತ ಬಾಲಕಿ ಈ ವರ್ಷದ ಎಪ್ರಿಲ್‌ನಿಂದ ಕಾರಾಗೃಹದಲ್ಲಿರುವ ಆರೋಪಿಯಿಂದ ಈಗಾಗಲೇ ಮಗುವನ್ನು ಪಡೆದಿದ್ದಾಳೆ. ಅಲ್ಲದೆ, ಆಕೆಯ ತಂದೆ ಕೂಡ ಪ್ರಕರಣದ ಅರ್ಹತೆಯ ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ, ಆತನ ಬಿಡುಗಡೆಯನ್ನು ವಿರೋಧಿಸಿಲ್ಲ ಎಂಬ ಅಂಶವನ್ನು ಪರಿಗಣಿಸಿ ನಾನು ಜಾಮೀನು ನೀಡಲು ಇದು ಸೂಕ್ತ ಪ್ರಕರಣ ಎಂದು ಪರಿಗಣಿಸಿದ್ದೇನೆ ಎಂದು ನ್ಯಾಯಾಧೀಶರು ಹೇಳಿದರು.
ಆರೋಪಿ ಯುವತಿಯನ್ನು 15 ದಿನಗಳ ಒಳಗೆ ವಿವಾಹವಾಗಬೇಕು ಹಾಗೂ ಒಂದು ತಿಂಗಳೊಳಗೆ ವಿವಾಹ ನೋಂದಣಿ ಮಾಡಬೇಕು ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಹೇಳಿದ್ದಾರೆ.