ಶಂಕರಾಚಾರ್ಯರಾಗಿ ಸ್ವಾಮಿ ಅವಿಮುಕ್ತೇಶ್ವರಾನಂದ ಪಟ್ಟಾಭಿಷೇಕಕ್ಕೆ ಸುಪ್ರೀಂ ಕೋರ್ಟ್ ತಡೆ
ಹೊಸದಿಲ್ಲಿ,ಅ.15: ಉತ್ತರಾಖಂಡದ ಬದರಿನಾಥದಲ್ಲಿರುವ ಜ್ಯೋತಿಷ್ ಪೀಠದ ಶಂಕರಾಚಾರ್ಯರಾಗಿ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ(Avimukteswarananda Saraswati ) ಯವರ ಪಟ್ಟಾಭಿಷೇಕ(coronation)ಕ್ಕೆ ಸರ್ವೋಚ್ಚ ನ್ಯಾಯಾಲಯವು ತಡೆಯನ್ನು ನೀಡಿದೆ.
ಜ್ಯೋತಿಷ್ ಪೀಠದ ನೂತನ ಶಂಕರಾಚಾರ್ಯರಾಗಿ ಅವಿಮುಕ್ತೇಶ್ವರಾನಂದ(Avimukteswarananda)ರ ನೇಮಕವನ್ನು ಅನುಮೋದಿಸಿಲ್ಲ ಎಂದು ಪುರಿಯ ಗೋವರ್ಧನ ಮಠದ ಶಂಕರಾಚಾರ್ಯರು ಅಫಿಡವಿಟ್ ಸಲ್ಲಿಸಿದ್ದಾರೆ ಎಂದು ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ತಿಳಿಸಿದ ಬಳಿಕ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ (BR Gawai) ಮತ್ತು ಬಿ.ವಿ.ನಾಗರತ್ನಾ (B.V. Nagaratna) ಅವರ ಪೀಠವು ಈ ಆದೇಶವನ್ನು ಹೊರಡಿಸಿತು.
ದಿವಂಗತರಾಗಿರುವ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿಯವರು ತನ್ನನ್ನು ಜ್ಯೋತಿಷ್ ಪೀಠದ ವಾರಸುದಾರನಾಗಿ ನೇಮಕಗೊಳಿಸಿದ್ದಾರೆ ಎಂದು ಸ್ವಾಮಿ ಅವಿಮುಕ್ತೇಶ್ವರಾನಂದರು ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಪೀಠವು ಕೈಗೆತ್ತಿಕೊಂಡಿತ್ತು.
ಈ ವಿಷಯವು 2020ರಿಂದಲೂ ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿಯಿದೆ.