×
Ad

ವೇದ ಗಣಿತ ಹಿಂತೆಗೆತ; ದ.ಸಂ.ಸ. ಹೋರಾಟಕ್ಕೆ ಸಂದ ಜಯ : ಸುಂದರ ಮಾಸ್ತರ್

Update: 2022-10-15 22:51 IST

ಉಡುಪಿ : ಕರ್ನಾಟಕ ಸರಕಾರವು ಹೊರಡಿಸಿದ್ದ ವೇದ ಗಣಿ ಕಲಿಕೆ ಕಾರ್ಯಕ್ರಮವನ್ನು ಹಿಂತೆಗೆದುಕೊಂಡಿರು ವುದು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸಂಘಟನೆಯ ಹೋರಾಟಕ್ಕೆ ಸಂದ ಜಯ ಎಂದು ದ.ಸಂ.ಸ.ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕರಾದ ಶ್ರೀ. ಸುಂದರ ಮಾಸ್ತರ್ ತಿಳಿಸಿದರು.

ಇತ್ತೀಚೆಗೆ ಕರ್ನಾಟಕ ಸರಕಾರ ಜಾರಿಗೆ ತಂದಿದ್ದ ಪರಿಶಿಷ್ಟ ರ ಮೀಸಲು ನಿಧಿ  SCSP ಹಾಗೂ TSP ಯಿಂದ 70 ಕೋಟಿ ರೂಪಾಯಿ ಯನ್ನು ವೇದ ಗಣಿತ ಕಲಿಕೆಗೆ ವರ್ಗಾವಣೆ ಮಾಡಿದ್ದನ್ನು ವಿರೋಧಿಸಿ ಉಡುಪಿಯ ರಾಜ ಬೀದಿಗಳಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ ರವರ ಆಣುಕು ಶವಯಾತ್ರೆ ನಡೆಸಿ ಹುತಾತ್ಮ ಚೌಕದ ಬಳಿ ಪ್ರತಿಕ್ರತಿ ಶವವನ್ನು ದಹಿಸಿ ಉಗ್ರ ಪ್ರತಿಭಟನೆ ನಡೆಸಲಾಗಿತ್ತು ಎಂದರು.

ಸತ್ತೋಲೆಯನ್ನು ವಾಪಾಸು ಪಡೆದದ್ದಕ್ಕೆ ದ.ಸಂ.ಸ. ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ರೀ. ಶ್ಯಾಮರಾಜ್ ಬಿರ್ತಿ , ಭಾಸ್ಕರ್ ಮಾಸ್ಟರ್ ಕುಂಜಿಬೆಟ್ಟು , ಅಣ್ಣಪ್ಪ ನಕ್ರೆ , ಶ್ಯಾಮಸುಂದರ್ ತೆಕ್ಕಟ್ಟೆ , ಮಂಜುನಾಥ್ ಬಾಳ್ಕುದ್ರು , ಗೋಪಾಲಕ್ರಷ್ಣ ಕುಂದಾಪುರ , ಖಜಾಂಚಿ ಶ್ರೀಧರ್ ಕುಂಜಿಬೆಟ್ಟು ಸಂತಸ ವ್ಯಕ್ತಪಡಿಸಿರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News