ನೀಲಕುರಿಂಜಿ ನೋಡುವ ಕನಸು ನನಸಾಗಿಸಲು ವೃದ್ಧ ತಾಯಿಯನ್ನು ಹೊತ್ತು ಬೆಟ್ಟವೇರಿದ ಮಕ್ಕಳು

Update: 2022-10-16 14:49 GMT
Photo: Twitter/BobinsAbraham (ScreenGrab)

ಇಡುಕ್ಕಿ: ಕೇವಲ ಹನ್ನೆರಡು ವರ್ಷಗಳಿಗೊಮ್ಮೆ ಮಾತ್ರ ಅರಳುವ ಪಶ್ಚಿಮ ಘಟ್ಟದ ​​ಅಪರೂಪದ ಹೂವಾದ ನೀಲಕುರಿಂಜಿಯನ್ನು ನೋಡುವ ಕನಸನ್ನು ನನಸಾಗಿಸಲು ಕೇರಳದ ಇಬ್ಬರು ಪುತ್ರರು ತಮ್ಮ ವಯಸ್ಸಾದ ತಾಯಿಯನ್ನು ಹೆಗಲ ಮೇಲೆ ಹೊತ್ತು ಕಡಿದಾದ ಬೆಟ್ಟವನ್ನು ಏರಿದ್ದಾರೆ.

ವಯೋಸಹಜ ಕಾಯಿಲೆಗಳಿಂದ ಬಳಲುತ್ತಿರುವ ಕೊಟ್ಟಾಯಂ ಜಿಲ್ಲೆಯ ಮುಟ್ಟುಚಿರಾ ನಿವಾಸಿ 87 ವರ್ಷದ ಎಲಿಕುಟ್ಟಿ ಪೌಲ್ ಅವರು ನೆರೆಯ ಜಿಲ್ಲೆ ಇಡುಕ್ಕಿಯಲ್ಲಿ ಅರಳಿದ ಅಪರೂಪದ ಹೂವುಗಳನ್ನು ನೋಡಬೇಕೆಂದು ತಮ್ಮ ಮಗನೊಬ್ಬರಿಗೆ ತಿಳಿಸಿದ್ದಾರೆ.

ಮರು ಆಲೋಚನೆಯಿಲ್ಲದೆ, ಅವಳ ಮಕ್ಕಳಾದ ರೋಜನ್ ಮತ್ತು ಸತ್ಯನ್ ಅವರನ್ನು ಜೀಪಿನಲ್ಲಿ ಕರೆದುಕೊಂಡು ಮುನ್ನಾರ್ ಬಳಿಯ ಕಲ್ಲಿಪಾರ ಬೆಟ್ಟಗಳನ್ನು ತಲುಪಿದ್ದಾರೆ. ಆದರೆ ಅಲ್ಲಿಗೆ ತಲುಪಿದ ನಂತರವೇ ಬೆಟ್ಟದ ತುದಿಗೆ ವಾಹನ ಸಂಚಾರಕ್ಕೆ ರಸ್ತೆಗಳಿಲ್ಲ ಎಂಬ ವಾಸ್ತವ ಕುಟುಂಬಕ್ಕೆ ಅರಿವಾಗಿದೆ.

ಆದರೂ, ತಮ್ಮ ತಾಯಿಯ ಕನಸನ್ನು ಬಿಟ್ಟುಕೊಡಲು ತಯಾರಿಲ್ಲದ ಇಬ್ಬರು ಪುತ್ರರು ತಮ್ಮ ವಯಸ್ಸಾದ ತಾಯಿಯನ್ನು ತಮ್ಮ ಹೆಗಲ ಮೇಲೆ ಎತ್ತಿಕೊಂಡು ಸುಮಾರು 1.5 ಕಿಮೀ ದೂರದ ಬೆಟ್ಟದ ತುದಿಗೆ ಏರಿದ್ದಾರೆ.   

ನೀಲಕುರಿಂಜಿ (ಸ್ಟ್ರೋಬಿಲಾಂಥೆಸ್ ಕುಂತಿಯಾನ) ಅಪರೂಪದ ಹೂವು ಪಶ್ಚಿಮ ಘಟ್ಟಗಳಾದ್ಯಂತ ಕಂಡುಬರುತ್ತದೆ ಮತ್ತು ಒಂದು ನಿರ್ದಿಷ್ಟ ಪ್ರದೇಶದಲ್ಲಿ ಹನ್ನೆರಡು ವರ್ಷಗಳಿಗೊಮ್ಮೆ ಮಾತ್ರ ಅರಳುತ್ತದೆ.

ಇಡುಕ್ಕಿ ಜಿಲ್ಲೆಯ ಮುನ್ನಾರ್ ಗಿರಿಧಾಮ ಅತ್ಯಂತ ಪ್ರಸಿದ್ಧವಾದ ನೀಲಕುರಿಂಜಿ ಹೂಬಿಡುವ ಸ್ಥಳವಾಗಿದೆ. ಕೊಡಗಿನಲ್ಲೂ ಈ ಬಾರಿ ನೀಲಕುರಿಂಜಿ ಹೂ ಅರಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News