ಗಂಗುಲಿ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ವಂಚಿತರಾಗಿದ್ದಾರೆ: ಮಮತಾ ಬ್ಯಾನರ್ಜಿ

Update: 2022-10-17 10:29 GMT
Photo:PTI

 ಕೋಲ್ಕತ್ತಾ: ಭಾರತೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿ ಮುಂದುವರಿಯುವ   ಅವಕಾಶದಿಂದ ಸೌರವ್ ಗಂಗುಲಿ ಅವರು "ವಂಚಿತರಾಗಿದ್ದಾರೆ" ಎಂದು ಹೇಳಿರುವ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ , ಗಂಗುಲಿ ಅವರನ್ನು ಐಸಿಸಿ (ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್) ಗೆ ಕಳುಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

ಸೌರವ್ ಗಂಗುಲಿ ಅವರನ್ನು "ಅನ್ಯಾಯವಾಗಿ ಬಿಸಿಸಿಐನಿಂದ ಹೊರಗಿಡಲಾಗಿದೆ" ಎಂದು ಬಂಗಾಳ ಮುಖ್ಯಮಂತ್ರಿ ಹೇಳಿದರು.

"ಅವರು ವಂಚಿತರಾಗಿದ್ದಾರೆ, ಅವರ ತಪ್ಪೇನು? ನನಗೆ ತುಂಬಾ ದುಃಖವಾಗಿದೆ. ನನಗೆ ನಿಜಕ್ಕೂ ಆಘಾತವಾಗಿದೆ. ಸೌರವ್ ಜನಪ್ರಿಯ ವ್ಯಕ್ತಿ. ಅವರು ಭಾರತೀಯ ಕ್ರಿಕೆಟ್ ನಾಯಕರಾಗಿದ್ದವರು.  ಅವರು ದೇಶಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರು  ಬಂಗಾಳಕ್ಕೆ ಮಾತ್ರವಲ್ಲ,  ಭಾರತದ ಹೆಮ್ಮೆ, ಅವರನ್ನು ಏಕೆ ಅನ್ಯಾಯದ ರೀತಿಯಲ್ಲಿ ಹೊರಗಿಡಲಾಯಿತು'' ಎಂದು ಮಮತಾ ಬ್ಯಾನರ್ಜಿ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

"ಪ್ರಧಾನಿ ಅವರಿಗೆ ನನ್ನ ನಮ್ರ ನಮನಗಳು. ದಯವಿಟ್ಟು ಸೌರವ್ ಗಂಗುಲಿ ಅವರು ಐಸಿಸಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತೆ ನೋಡಿಕೊಳ್ಳಿ’’ಎಂದು ಹೇಳಿದರು.

ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಅಕ್ಟೋಬರ್ 20 ರಂದು ನಾಮಪತ್ರ ಸಲ್ಲಿಸಬೇಕು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News