×
Ad

ಬಂಧನಕ್ಕೆ ಹೆದರುವುದಿಲ್ಲ, ಸುಳ್ಳು ಪ್ರಕರಣದಲ್ಲಿ ನನ್ನನ್ನು ಜೈಲಿಗೆ ಕಳುಹಿಸಲು ಬಿಜೆಪಿ ಬಯಸಿದೆ: ಸಿಸೋಡಿಯ

Update: 2022-10-17 21:41 IST
ಮನೀಶ್ ಸಿಸೋಡಿಯಾ, Photo: twitter

ಹೊಸದಿಲ್ಲಿ,ಅ.17: ಅಬಕಾರಿ ನೀತಿ ವಿಷಯದಲ್ಲಿ ಸಿಬಿಐ ತನ್ನ ವಿರುದ್ಧ ‘ಸುಳ್ಳು’('lie') ಪ್ರಕರಣವನ್ನು ದಾಖಲಿಸಿದೆ ಎಂದು ಸೋಮವಾರ ಇಲ್ಲಿ ಆರೋಪಿಸಿದ ದಿಲ್ಲಿ ಉಪಮುಖ್ಯಮಂತ್ರಿ ಮನೀಷ ಸಿಸೋಡಿಯಾ (Manish Sisodia)ಅವರು,ಚುನಾವಣೆ ಸನ್ನಿಹಿತವಾಗಿರುವ ಗುಜರಾತಿನಲ್ಲಿ ಆಪ್ನ ಜನಪ್ರಿಯತೆಯಿಂದ ಬಿಜೆಪಿ ಗಾಬರಿಗೊಂಡಿರುವುದರಿಂದ ತನ್ನ ವಿಚಾರಣೆ ನಡೆಯುತ್ತಿದೆ ಎಂದರು.

ಸಿಸೋಡಿಯಾ ಗುಜರಾತಿನಲ್ಲಿ ಪ್ರಚಾರ ನಡೆಸುವುದನ್ನು ತಡೆಯಲು ಅವರನ್ನು ಬಂಧಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಹಾಗೂ ಆಪ್ ಸಂಚಾಲಕ ಅರವಿಂದ ಕೇಜ್ರಿವಾಲ್(Arvind Kejriwal) ಹೇಳಿದರು.

ಹಲವಾರು ಕಾರ್ಯಕರ್ತರು ಮತ್ತು ನಾಯಕರೊಂದಿಗೆ ಕಾರು ಮತ್ತು ಬೈಕ್ಗಳ ಜಾಥಾದಲ್ಲಿ ಸಿಬಿಐ ಕಚೇರಿಗೆ ವಿಚಾರಣೆಗಾಗಿ ತೆರಳುವ ಮುನ್ನ ಸಿಸೋದಿಯಾ ಮಾರ್ಗಮಧ್ಯದಲ್ಲಿ ಎರಡು ಕಡೆಗಳಲ್ಲಿ ಆಪ್ ಕಾರ್ಯಕರ್ತರನ್ನುದ್ದೇಸಿ ಮಾತನಾಡಿದರು. ರಾಜಘಾಟ್ಕ್ಕೆ ಭೇಟಿ ನೀಡಿ ರಾಷ್ಟ್ರಪಿತನ ಆಶೀರ್ವಾದವನ್ನೂ ಪಡೆದುಕೊಂಡರು.

ತಾನು ತನಿಖೆಗೆ ಪೂರ್ಣ ಸಹಕಾರವನ್ನು ನೀಡುತ್ತೇನೆ,ಬಂಧನದ ಬಗ್ಗೆ ತಾನು ಹೆದರಿಕೊಂಡಿಲ್ಲ ಎಂದು ಸಿಸೋದಿಯಾ ಹೇಳಿದರು.

ಈಗ ರದ್ದುಗೊಂಡಿರುವ ದಿಲ್ಲಿ ಸರಕಾರದ ಅಬಕಾರಿ ನೀತಿಯ ಜಾರಿಯಲ್ಲಿ ಅವ್ಯವಹಾರಗಳ ಆರೋಪದಲ್ಲಿ ಸಿಬಿಐ ದಾಖಲಿಸಿರುವ ಎಫ್ಐಆರ್ನಲ್ಲಿ ಅಬಕಾರಿ ಖಾತೆಯನ್ನೂ ಹೊಂದಿರುವ ಸಿಸೋದಿಯಾ ಮುಖ್ಯ ಆರೋಪಿಯಾಗಿದ್ದಾರೆ.

 ಚುನಾವಣಾ ಪ್ರಚಾರಕ್ಕಾಗಿ ಸಿಸೋದಿಯಾ ಗುಜರಾತಿಗೆ ತೆರಳಲಿದ್ದರು,ಇದೇ ಕಾರಣದಿಂದ ಅವರ ಬಂಧನಕ್ಕೆ ಹುನ್ನಾರ ನಡೆದಿದೆ. ಆದರೆ ಪ್ರಚಾರ ಕಾರ್ಯವು ನಿಲ್ಲುವುದಿಲ್ಲ ಎಂದು ಹೇಳಿದ ಕೇಜ್ರಿವಾಲ್,ಗುಜರಾತಿನಲ್ಲಿಯ ಪ್ರತಿ ವ್ಯಕ್ತಿಯೂ ಆಪ್ಗಾಗಿ ಪ್ರಚಾರ ನಡೆಸುತ್ತಿದ್ದಾನೆ ಎಂದರು.

 ಸಿಬಿಐ ಕಚೇರಿಗೆ ತೆರಳುವ ಮುನ್ನ ಸರಣಿ ಟ್ವೀಟ್ಗಳನ್ನು ಮಾಡಿದ್ದ ಸಿಸೋಡಿಯಾ, ಗುಜರಾತ್ ಈಗ ಎಚ್ಚರಗೊಂಡಿದೆ ಮತ್ತು ಅಲ್ಲಿ ಪ್ರತಿಯೊಬ್ಬರೂ ಒಳ್ಳೆಯ ಶಾಲೆಗಳು, ಆಸ್ಪತ್ರೆಗಳು, ಉದ್ಯೋಗಗಳು ಮತ್ತು ವಿದ್ಯುತ್ಗಾಗಿ ಪ್ರಚಾರ ಮಾಡುತ್ತಿದ್ದಾರೆ. ಗುಜರಾತಿನಲ್ಲಿ ಮುಂಬರುವ ಚುನಾವಣೆಯು ಒಂದು ‘ಆಂದೋಲನ’ವಾಗಲಿದೆ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News