×
Ad

ಮಾಜಿ ಸಚಿವರಿಗೆ ಸವಾಲು ಹಾಕಿದ ಶಾಸಕ ಲಾಲಾಜಿ ಮೆಂಡನ್

Update: 2022-10-17 22:05 IST
ಲಾಲಾಜಿ ಮೆಂಡನ್

ಕಾಪು : ಕಾಂಗ್ರೆಸ್ ಗೆಲುವಿಗೆ ಮುಸ್ಲಿಂ ಸಮುದಾಯದ ಮತವನ್ನು ನೆಚ್ಚಿಕೊಂಡಿರುವ ಕಾಂಗ್ರೆಸ್ ಪಕ್ಷಕ್ಕೆ ಈಗ ಎಸ್‍ಡಿಪಿಐ ಪಕ್ಷ ಬಂದ ಮೇಲೆ ತಲೆನೋವು ಶುರುವಾಗಿದೆ. ತಮ್ಮ ಖಾತೆಯಲ್ಲಿದ್ದ ಮತಗಳು ಅವರ ಪಾಲಾಗುತ್ತಿವೆಯಲ್ಲಾ ಎಂಬ ಕೋಪ ಮತ್ತು ಅಸೂಯೆಯಿಂದ ಕಾಪು ವಿಧಾಸಭಾ ಕ್ಷೇತ್ರದ ಮಾಜಿ ಶಾಸಕರಾದ ವಿನಯ್ ಕುಮಾರ್ ಸೊರಕೆ ಹೇಳಿಕೆಗಳನ್ನು ನೀಡುತ್ತಿದ್ದಾರೆ.

ಬಿಜೆಪಿ ಮತ್ತು ಎಸ್‍ಡಿಪಿಐ ಒಂದೇ ನಾಣ್ಯದ ಎರಡು ಮುಖಗಳು, ಎಸ್‍ಡಿಪಿಐಯವರ ಚುನಾವಣಾ ಖರ್ಚನ್ನು ಬಿಜೆಪಿ ಮಾಡುತ್ತಿದೆ ಎಂಬ ಮಾಜಿ ಶಾಸಕ ವಿನಯಕುಮಾರ್ ಸೊರಕೆಯವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕಾಪು ಶಾಸಕ ಲಾಲಾಜಿ ಮೆಂಡನ್, ಬಿಜೆಪಿ ಪಕ್ಷ ಮತ್ತು ನನಗೆ ಎಸ್‍ಡಿಪಿಐ ಪಕ್ಷದೊಂದಿಗೆ ಪಕ್ಷಕ್ಕೆ ಸಂಬಂಧ ಕಲ್ಪಿಸಿ ನೀಡಿದ ಹೇಳಿಕೆಯನ್ನು ಮೊದಲು ಸೊರಕೆಯವರು ನಿರೂಪಿಸಲಿ ಇಲ್ಲದಿದ್ದರೆ ಬಹಿರಂಗ ಕ್ಷಮೆಯನ್ನು ಕೇಳಬೇಕು ಎಂದು ಆಗ್ರಹಿಸಿದರು. 

ಬಾಯಿಗೆ ಬಂದ ಹಾಗೆ ಹೇಳಿಕೆ ನೀಡಿರುವ ಸೊರಕೆಯವರು ಗಂಡಸ್ತನವಿದ್ದರೆ ತಾವು ನೀಡಿರುವ ಹೇಳಿಕೆಗೆ ಪುರಾವೆಯನ್ನು ಒದಗಿಸಲಿ ಇಲ್ಲವಾದಲ್ಲಿ ಸತ್ಯಪ್ರಮಾಣಕ್ಕೆ ಯಾವುದೇ ಪುಣ್ಯಕ್ಷೇತ್ರಕ್ಕೆ ಬರಲಿ ನಾನು ಸಿದ್ದನಿದ್ದೇನೆ. ಹೀಗೆ ಮುಂದುವರಿದರೆ 'ಮಾತಿಗೆಟ್ಟ ಸೊರಕೆ' ಎಂದು ಹೊಸ ನಾಮಕರಣ ಅವರಿಗೆ ಮಾಡಬೇಕಾದ ಅನಿವಾರ್ಯತೆಯನ್ನು ಅವರೇ ಸೃಷ್ಟಿಸಿಕೊಳ್ಳುತ್ತಾರೆ.

ಎಸ್‍ಡಿಪಿಐ ಮಾತೃ ಸಂಘಟನೆಯಾದ ಪಿಏಫ್‍ಐಯನ್ನು ನಿಷೇಧ ಮಾಡಿದ ಬಿಜೆಪಿಯವರಿಗೆ ಎಸ್‍ಡಿಪಿಐ ಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಅಗತ್ಯವೇನಿದೆ ? ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಪುರಸಭೆಯಲ್ಲಿ ಆಗಲಿ ಅಥವಾ ನಮ್ಮ ಉಡುಪಿ ಜಿಲ್ಲೆಯಲ್ಲಿ ಹಲವು ಪಂಚಾಯತ್‍ಗಳಲ್ಲಿ ಕಾಂಗ್ರೆಸ್ - ಎಸ್‍ಡಿಪಿಐ  ಒಳಒಪ್ಪಂದ ಮತ್ತು ಮೈತ್ರಿಯ ಅಧಿಕಾರ ಹಿಡಿರುವುದು ನಮಗೆ ತಿಳಿದೇ ಇದೆ. ಹಾಗಿದ್ದಲ್ಲಿ ನಮ್ಮ ಮೇಲೆ ಯಾವ ನೈತಿಕತೆ ಆಧಾರದಲ್ಲಿ  ಸೊರಕೆಯವರು ಆರೋಪ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. 

ನಮಗೆ ಇನ್ನೊಂದು ಪಕ್ಷದ ಖರ್ಚುವೆಚ್ಚ ನೋಡುವಷ್ಟು ಅನಿವಾರ್ಯತೆ ಇಲ್ಲ. ನಮ್ಮ ಸ್ವಂತ ಬಲದಲ್ಲಿ ಬಲವರ್ಧನೆ ಆಗುತ್ತಿದೆ.  ಪುತ್ತೂರಿನಲ್ಲಿ ಸೊರಕೆಯವರನ್ನು ಎಂದೋ ಅಲ್ಲಿಯವರು ಹೊರಗೆ ಓಡಿಸಿದ್ದಾರೆ. ಈಗ ಇಲ್ಲಿ ಬಂದು ಅದನ್ನೇ ಮಾಡಲು ಹೊರಟಿದ್ದರೂ ಕಾಪು ಜನ ಬುದ್ದಿವಂತರಿದ್ದು ಈಗಾಗಲೇ ಉತ್ತರವನ್ನು ಕೊಟ್ಟಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News