×
Ad

ಬೀದಿ ನಾಯಿ ದಾಳಿಗೆ ಒಂದು ವರ್ಷದ ಮಗು ಮೃತ್ಯು

Update: 2022-10-18 11:31 IST

Photo: Twitter/@amitchoudhar_y

ಹೊಸದಿಲ್ಲಿ: ಸೋಮವಾರ ದಿಲ್ಲಿ ಸಮೀಪದ ನೋಯ್ಡಾದ ಅಪಾರ್ಟ್‌ಮೆಂಟ್ ಕಟ್ಟಡದಲ್ಲಿ ಬೀದಿನಾಯಿಯೊಂದರ ದಾಳಿಗೆ ಒಳಗಾಗಿದ್ದ ಮಗುವೊಂದು ಸಾವನ್ನಪ್ಪಿದೆ.

ಪೊಲೀಸರ ಪ್ರಕಾರ, ನಾಯಿಯ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಒಂದು ವರ್ಷದ ಮಗುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ರಾತ್ರಿಯೇ ಮೃತಪಟ್ಟಿದೆ.

ನಿನ್ನೆ ಸಂಜೆ 4.30ರ ಸುಮಾರಿಗೆ ನೋಯ್ಡಾದ ಸೆಕ್ಟರ್ 100ರಲ್ಲಿರುವ ಲೋಟಸ್ ಬೌಲೆವಾರ್ಡ್ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿ ರಜನೀಶ್ ವರ್ಮಾ ತಿಳಿಸಿದ್ದಾರೆ.

"ಮಗುವಿನ ಪೋಷಕರು ಕಟ್ಟಡ ಕಾರ್ಮಿಕರು. ಇಬ್ಬರೂ ಅಪಾರ್ಟ್ ಮೆಂಟ್ ಆವರಣದೊಳಗೆ ಕೆಲಸ ಮಾಡುತ್ತಿದ್ದರು ಹಾಗೂ  ತಮ್ಮ ಮಗುವನ್ನು ತಮ್ಮ ಹತ್ತಿರ ಇರಿಸಿಕೊಂಡಿದ್ದರು. ಆದರೆ, ಬೀದಿ ನಾಯಿಯು ಕಟ್ಟಡದೊಳಗೆ ಪ್ರವೇಶಿಸಿ ಮಗುವಿಗೆ ಕಚ್ಚಿತು.  ಮಗುವಿಗೆ ತೀವ್ರವಾಗಿ ಗಾಯವಾಯಿತು" ಎಂದು ವರ್ಮಾ ಪಿಟಿಐಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News