ಮಧ್ಯಪ್ರದೇಶ: ಮೊಬೈಲ್ ಕಳ್ಳತನದ ಶಂಕೆಯಲ್ಲಿ ಬಾಲಕನನ್ನು ಬಾವಿಯಲ್ಲಿ ನೇತಾಡಿಸಿದ ವ್ಯಕ್ತಿ, ಪ್ರಕರಣ ದಾಖಲು

Update: 2022-10-18 09:20 GMT
Photo: ANI/VIDEO GRAB

ಭೋಪಾಲ್: ಮೊಬೈಲ್ ಕಳ್ಳತನದ ಶಂಕೆಯ ಮೇಲೆ 12 ವರ್ಷದ ಬಾಲಕನನ್ನು ವ್ಯಕ್ತಿಯೊಬ್ಬ ಬಾವಿಯೊಳಗೆ ನೇತಾಡಿಸಿರುವ ಆಘಾತಕಾರಿ  ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 

ವೈರಲ್ ವೀಡಿಯೊದಲ್ಲಿ ಹುಡುಗನು ತಾನು  ಮುಗ್ಧನೆಂದು ಹೇಳಿಕೊಳ್ಳುತ್ತಿರುವುದು, ತನ್ನ ಪ್ರಾಣವನ್ನು ರಕ್ಷಿಸುವಂತೆ ಬೇಡಿಕೊಳ್ಲುತ್ತಿರುವುದು  ಎಂದು ಕಂಡುಬಂದಿದೆ. ಬಾಲಕನನ್ನು ಹಿಡಿದಿದ್ದ ವ್ಯಕ್ತಿ ಬಾಲಕನನ್ನು ನೀರಿನೊಳಗೆ ಬೀಳಿಸುವುದಾಗಿ ಬೆದರಿಕೆ ಹಾಕಿದ್ದ.

ಛತ್ತರ್‌ಪುರ ಜಿಲ್ಲೆಯ ಅತ್ಖೋನಾ ಗ್ರಾಮದಲ್ಲಿ ಈ ಘಟನ ನಡೆದಿದೆ. ವೀಡಿಯೊದಲ್ಲಿ ಹುಡುಗನು ತಾನು ಯಾವುದೇ ಮೊಬೈಲ್ ಫೋನ್ ಕದ್ದಿಲ್ಲ ಎಂದು ಪುನರುಚ್ಚರಿಸುವುದು ,ಆದರೆ ವ್ಯಕ್ತಿಯು ಬಾಲಕನ ಒಂದು ಕೈಯನ್ನು ಅಪಾಯಕಾರಿ ರೀತಿಯಲ್ಲಿ ಹಿಡಿದುಕೊಂಡಿರುವುದು ಕಂಡುಬಂದಿದೆ.

ಆರೋಪಿಯ ವಿರುದ್ಧ ನರಹತ್ಯೆ ಯತ್ನ ಹಾಗೂ  ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ ನಂತರ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಚಿನ್ ಶರ್ಮಾ ತಿಳಿಸಿದ್ದಾರೆ.

ವಿಡಿಯೋವನ್ನು ಸೆರೆಹಿಡಿದ 14 ವರ್ಷದ ಬಾಲಕ ಸಂತ್ರಸ್ತ ಬಾಲಕನ ಪೋಷಕರಿಗೆ ಮಾಹಿತಿ ನೀಡಿದ ನಂತರ ಅವರು ಪೊಲೀಸರನ್ನು ಸಂಪರ್ಕಿಸಿದ್ದರು.

 ಈ ಘಟನೆಯನ್ನು ಸೆರೆ ಹಿಡಿದು ತಾನು ತೊಂದರೆಗೆ ಸಿಲುಕಿದ್ದೇನೆ. ಪೊಲೀಸರು ತನ್ನನ್ನು ಹೊರಠಾಣೆಗೆ ಕರೆಸಿದರು. ಈ  ವಿಷಯವನ್ನು ಸಂಕೀರ್ಣಗೊಳಿಸಿದ್ದಾಗಿ ಆರೋಪಿಸಿ ಥಳಿಸಿದರು ಎಂದು 14 ವರ್ಷದ ಬಾಲಕ ಹೇಳಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News