ಸಂಸದನೊಂದಿಗೆ ಸವಾಲಿನಲ್ಲಿ ಸೋತ ನಿತಿನ್‌ ಗಡ್ಕರಿ ಈಗ 32,000 ಕೋಟಿ ರೂ. ಪಾವತಿಸಲೇಬೇಕು !

Update: 2022-10-18 11:39 GMT


ಹೊಸದಿಲ್ಲಿ: ನಿಮ್ಮ ಕ್ಷೇತ್ರದ ಅಭಿವೃದ್ಧಿ ಯೋಜನೆ ಪ್ರಸ್ತಾವನೆಗಳನ್ನು ಮಂಜೂರುಗೊಳಿಸಬೇಕಿದ್ದರೆ ತೂಕ ಇಳಿಸಿಕೊಳ್ಳಿ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಒಡ್ಡಿದ ಸವಾಲನ್ನು ಸ್ವೀಕರಿಸಿದ್ದ ಮಧ್ಯ ಪ್ರದೇಶದ ಉಜ್ಜಯನಿ ಕ್ಷೇತ್ರದ ಸಂಸದ ಅನಿಲ್ ಫಿರೋಜಿಯಾ, ತಾವು 32 ಕೆಜಿ ತೂಕ ಕಳೆದುಕೊಂಡಿರುವುದಾಗಿ ಹೇಳಿ ತಮ್ಮ ಕ್ಷೇತ್ರಕ್ಕೆ ರೂ 2300 ಕೋಟಿ ಮೌಲ್ಯದ ಯೋಜನೆಗಳಿಗೆ ಅನುಮೋದನೆ ಪಡೆದುಕೊಂಡಿದ್ದಾರೆ. ಈ ಕುರಿತು ಸಂಸದರೇ ಹೇಳಿಕೊಂಡಿದ್ದಾರೆ. ಈ ಹಿಂದೆ, ಒಂದು ಕೆ.ಜಿ ಕಳೆದುಕೊಂಡರೆ 1,000ಕೋಟಿ ರೂ. ಮಂಜೂರು ಮಾಡುತ್ತೇನೆ ಎಂದು ಗಡ್ಕರಿ ಸವಾಲು ಹಾಕಿದ್ದರು. 

"ನಾನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಹೇಳಿದೆ... ಅವರು ತುಂಬಾ ಖುಷಿ ಪಟ್ಟರು" ಎಂದು ಅನಿಲ್ ಹೇಳಿದ್ದಾರೆ.

ತೂಕ ಕಳೆದುಕೊಳ್ಳಲು ಕೈಗೊಂಡ ಕ್ರಮಗಳ ಕುರಿತು ಹೇಳಿದಾಗ ಅವರು ನೀಡಿದ್ದ ಮಾಹಿತಿ ಹೀಗಿತ್ತು - "ಪ್ರತಿದಿನ ಬೆಳಿಗ್ಗೆ 5.30 ಕ್ಕೆ ಎದ್ದು ವಾಕಿಂಗ್ ಹೋಗುತ್ತೇನೆ. ಬೆಳಗ್ಗಿನ ವರ್ಕ್‍ಔಟ್ ಭಾಗವಾಗಿ ಓಡುವುದು, ವ್ಯಾಯಾಮ ಮತ್ತು ಯೋಗ ಮಾಡುತ್ತೇನೆ. ಆಯುರ್ವೇದ ಆಹಾರ ಪದ್ಧತಿ ಅನುಸರಿಸುತ್ತೇನೆ. ಲಘು ಉಪಾಹಾರ ಸೇವಿಸುತ್ತೇನೆ. ಮಧ್ಯಾಹ್ನದ ಊಟ ಮತ್ತು ರಾತ್ರಿಯ ಭೋಜನಕ್ಕಾಗಿ ಸಲಾಡ್, ಒಂದು ಬೌಲ್ ಹಸಿರು ತರಕಾರಿಗಳು ಹಾಗೂ ಮಿಶ್ರ ಧಾನ್ಯಗಳ ಒಂದು ರೋಟಿ ತಿನ್ನುವೆ. ಆಗಾಗ ಕ್ಯಾರಟ್ ಸೂಪ್ ಅಥವಾ ಒಣ ಹಣ್ಣುಗಳನ್ನು ತಿನ್ನುವೆ..."

"ನನ್ನ ತೂಕ ಹಿಂದೆ 135 ಕೆಜಿ ಆಗಿದ್ದರೆ ಈಗ 93 ಕೆಜಿ ಆಗಿದೆ. ನನ್ನ ಹಳೆ ಫೋಟೋ ಅನಿಲ್‍ಗೆ ತೋರಿಸಿದೆ. ಅದರಲ್ಲಿ ನನ್ನ ಗುರುತು ದೊರೆಯುವುದಿಲ್ಲ. ಅವರು ಕಳೆದುಕೊಳ್ಳುವ ಪ್ರತಿ ಕೆಜಿ ತೂಕಕ್ಕೆ ರೂ. 1000 ಕೋಟಿ ಮೌಲ್ಯದ ಯೋಜನೆ ಮಂಜೂರುಗೊಳಿಸುತ್ತೇನೆ" ಎಂದು ಫೆಬ್ರವರಿ ತಿಂಗಳಿನಲ್ಲಿ ಗಡ್ಕರಿ ಅವರು ಸಂಸದರಿಗೆ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News