ದೇಶದಲ್ಲೇ ಮೊದಲು: ವಶಪಡಿಸಿಕೊಂಡಿದ್ದು ಗೋಮಾಂಸವೇ? ಎಂದು ದೃಢೀಕರಿಸಲು ಗುಜರಾತ್‍ನಲ್ಲಿ ಲ್ಯಾಂಪ್ ಡಿಎನ್‍ಎ ಪರೀಕ್ಷೆ

Update: 2022-10-18 12:06 GMT
ಸಾಂದರ್ಭಿಕ ಚಿತ್ರ: PTI

ಅಹ್ಮದಾಬಾದ್: ದನದ ಮಾಂಸ ಅಕ್ರಮ ಸಾಗಾಟ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ ಮಾಂಸವು ದನದ್ದೇ ಹೌದೇ ಎಂದು ದೃಢೀಕರಿಸಲು ರ್ಯಾಪಿಡ್ ಟೆಸ್ಟ್ ಆರಂಭಿಸಿದ ದೇಶದ ಪ್ರಥಮ ರಾಜ್ಯ ಗುಜರಾತ್ ಆಗಿದೆ.

ಈ ರ್ಯಾಪಿಡ್ ಟೆಸ್ಟ್ - ಲ್ಯಾಂಪ್ ಡಿಎನ್‍ಎ ವಿಧಾನವನ್ನು ಸದ್ಯ ಅಹ್ಮದಾಬಾದ್ ಮತ್ತು ಗಾಂಧಿನಗರದಲ್ಲಿ ಸೀಮಿತ ಸಾಮರ್ಥ್ಯದೊಂದಿಗೆ ಆರಂಭಿಸಲಾಗಿದೆ. ಸಾಮಾನ್ಯ ವಿಧಾನಗಳಾದ ಸೆರೋಲಾಜಿಕಲ್ ಅನಾಲಿಸಿಸ್ ಮತ್ತು ಡಿಎನ್‍ಎ ಅನಾಲಿಸಿಸ್‍ಗೆ ಒಂದು ದಿನ ತಗಲುವುದರಿಂದ ಅವುಗಳಿಗೆ ಹೋಲಿಸಿದಾಗ ಹೊಸ ವಿಧಾನ ಉತ್ತಮವಾಗಿದೆ.

ಇತರ ವಿಧಾನಗಳಲ್ಲಿ ಮಾಂಸದ ಮಾದರಿಯನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಬೇಕಾಗಿದ್ದರೆ ಈ ವಿಧಾನದಲ್ಲಿ ಸ್ಥಳದಲ್ಲಿಯೇ ಪರೀಕ್ಷಿಸಬಹುದಾಗಿದೆ. ಬೇಯಿಸಿದ ಮಾಂಸಗಳನ್ನೂ ಈ ವಿಧಾನದಲ್ಲಿ ಪರೀಕ್ಷಿಸಬಹುದಾಗಿದೆ.

ನ್ಯಾಷನಲ್ ಫೊರೆನ್ಸಿಕ್ ಸಾಯನ್ಸಸ್ ಯುನಿವರ್ಸಿಟಿ ಇಲ್ಲಿನ ಹಿರಿಯ  ಪ್ರೊಫೆಸರ್ ಆಗಿರುವ ನಿಕುಂಜ್ ಬ್ರಹ್ಮಭಟ್ಟ್ ಅವರು ಲ್ಯಾಂಪ್ ಅಥವಾ ಲೂಪ್-ಮೀಡಿಯೇಟೆಡ್ ಐಸೊಥರ್ಮಲ್ ಆಂಪ್ಲಿಫಿಕೇಶನ್ ಕುರಿತಾದ ಅಧ್ಯಯನ ವರದಿಯನ್ನು ಕಡಿ ಸರ್ವ ವಿಶ್ವವಿದ್ಯಾಲಯದಿಂದ 2020 ರಲ್ಲಿ ಡಾಕ್ಟೋರಲ್ ಪ್ರಬಂಧದ ಭಾಗವಾಗಿ ಸಿದ್ಧಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News