ಬಿಲ್ಕಿಸ್ ಬಾನು ಅತ್ಯಾಚಾರಿಗಳ ಬಿಡುಗಡೆಯನ್ನು ಸಮರ್ಥಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಹಾರ್ದಿಕ್ ಪಟೇಲ್

Update: 2022-10-18 14:20 GMT

ಅಹಮದಾಬಾದ್: 2002 ರ ಗುಜರಾತ್ ಗಲಭೆಯಲ್ಲಿ ಬಿಲ್ಕಿಸ್ ಬಾನೋ ಮೇಲೆ ಅತ್ಯಾಚಾರ ಮತ್ತು ಆಕೆಯ ಕುಟುಂಬವನ್ನು ಕೊಂದ 11 ಮಂದಿಯನ್ನು ಬಿಡುಗಡೆಯನ್ನು ಕೇಂದ್ರ ಸಚಿವರೊಬ್ಬರು ಇಂದು ಗುಜರಾತ್ ಚುನಾವಣಾ ಪ್ರಚಾರದ ವೇಳೆ ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ndtv.com ವರದಿ ಮಾಡಿದೆ. 

 "ಅದು ಕಾನೂನಿನ ಪ್ರಕ್ರಿಯೆಯಾಗಿರುವುದರಿಂದ, ಸರ್ಕಾರ ಮತ್ತು ಸಂಬಂಧಪಟ್ಟವರು ಈ ನಿರ್ಧಾರವನ್ನು ತೆಗೆದುಕೊಂಡಾಗ, ನನಗೆ ಅದರಲ್ಲಿ ಯಾವುದೇ ತಪ್ಪು ಕಂಡುಬಂದಿಲ್ಲ" ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ NDTV ಗೆ ತಿಳಿಸಿದ್ದಾರೆ.

 "ಜೈಲಿನಲ್ಲಿ ಸಾಕಷ್ಟು ಸಮಯ ಕಳೆದ ಅಪರಾಧಿಗಳಿಗೆ, ಬಿಡುಗಡೆಗೆ ನಿಬಂಧನೆ ಇದೆ. ಅದರ ಪ್ರಕಾರ ಅವರನ್ನು ಬಿಡುಗಡೆ ಮಾಡಲಾಗಿದೆ" ಎಂದು ಸಚಿವರು ಹೇಳಿದ್ದಾರೆ. ಗುಜರಾತ್‌ ಸರ್ಕಾರ ಬಿಡುಗಡೆಗೊಳಿಸಲು ಮುಖ್ಯ ಕಾರಣವಾಗಿಟ್ಟ "ಉತ್ತಮ ನಡವಳಿಕೆಯ" ವಾದವನ್ನು ಜೋಶಿ ಸಮರ್ಥಿಸಿದ್ದಾರೆ. 

"ಉತ್ತಮ ನಡವಳಿಕೆಗಾಗಿ ಕೈದಿಗಳನ್ನು ಬಿಡುಗಡೆ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ.  ಇದನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ನಾನು ನಂಬುತ್ತೇನೆ.  ಖಂಡಿತವಾಗಿ, ಯಾವುದೇ ಅಪರಾಧಿಗಳು ತಮ್ಮ ಕೃತ್ಯಗಳಿಗೆ ಶಿಕ್ಷೆಗೆ ಅರ್ಹರು, ” ಎಂದು ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರುರುವ ಹಾರ್ದಿಕ್ ಪಟೇಲ್ ಕೂಡಾ ಸರ್ಕಾರದ ಕ್ರಮ ಸಮರ್ಥಿಸಿದ್ದಾರೆ.

 ಅದಾಗ್ಯೂ, ಮತ್ತೊಬ್ಬ ಬಿಜೆಪಿ ನಾಯಕ ಅಲ್ಪೇಶ್ ಠಾಕೂರ್ ಅವರು, ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಯ ಅಪರಾಧಿಗಳನ್ನು ಮುಕ್ತಗೊಳಿಸುವುದು ಸ್ವೀಕಾರಾರ್ಹವಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News