ಗೋಧಿಯ ಕನಿಷ್ಠ ಬೆಂಬಲ ಬೆಲೆ 110 ರೂ.ಏರಿಕೆ
Update: 2022-10-18 19:26 IST
ಹೊಸದಿಲ್ಲಿ,ಅ.18: ಸರಕಾರವು ಮಂಗಳವಾರ ಪ್ರಸಕ್ತ ಬೆಳೆ ವರ್ಷಕ್ಕೆ ಗೋದಿ(wheat)ಯ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ)ಯನ್ನು ಪ್ರತಿ ಕ್ವಿಂಟಲ್ ಗೆ 110 ರೂ.ಹೆಚ್ಚಿಸಿ 2,125 ರೂ.ಗೆ ನಿಗದಿಗೊಳಿಸಿದೆ. ಸಾಸಿವೆ(Mustard)ಯ ಎಂಎಸ್ಪಿಯನ್ನು 400 ರೂ.ಹೆಚ್ಚಿಸಲಾಗಿದ್ದು,ಇನ್ನು ಮುಂದೆ ರೈತರು ಪ್ರತಿ ಕ್ವಿಂಟಲ್ ಗೆ 5,450 ರೂ.ಪಡೆಯಲಿದ್ದಾರೆ.
ಉತ್ಪಾದನೆ ಮತ್ತು ರೈತರ ಆದಾಯವನ್ನು ಹೆಚ್ಚಿಸುವುದು ಎಂಎಸ್ಪಿ ಏರಿಕೆಯ ಉದ್ದೇಶವಾಗಿದೆ ಎನ್ನಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತ ಸಂಪುಟ ಸಮಿತಿಯ ಸಭೆಯಲ್ಲಿ ಎಂಎಸ್ಪಿ ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಸಂಪುಟ ಸಮಿತಿಯು 2022-23ನೇ ಬೆಳೆ ವರ್ಷ(ಜುಲೈ-ಜೂನ್) ಮತ್ತು 2023-2024ರ ಮಾರಾಟ ಋತುವಿಗಾಗಿ ಬಾರ್ಲಿ ಸೇರಿದಂತೆ ಆರು ರಬಿ (ಹಿಂಗಾರು) ಬೆಳೆಗಳ ಎಂಎಸ್ಪಿಗಳನ್ನು ಹೆಚ್ಚಿಸಿದೆ ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ