ಕಲ್ಯಾಣಪುರ ಮಿಲಾಗ್ರಿಸ್‌ನಲ್ಲಿ ವಿಶ್ವ ವಿದ್ಯಾರ್ಥಿಗಳ ದಿನಾಚರಣೆ

Update: 2022-10-18 14:07 GMT

ಕಲ್ಯಾಣಪುರ, ಅ.18: ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘ ಮತ್ತು ಗ್ರಂಥಾ ಲಯ ಮತ್ತು ಮಾಹಿತಿ ಕೇಂದ್ರ ಇದರ ಜಂಟಿ ಆಶ್ರಯದಲ್ಲಿ ಮಾಜಿ ರಾಷ್ಟ್ರಪತಿ ಮತ್ತು ಕ್ಷಿಪಣಿ ತಂತ್ರಜ್ಞಾನದ ವಿಜ್ಞಾನಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಜನ್ಮದಿನವನ್ನು ಅ.15ರಂದು ಕಾಲೇಜಿ ನಲ್ಲಿ ಆಚರಿಸಲಾಯಿತು.

ದಿನಾಚರಣೆಯ ಮಹತ್ವದ ಕುರಿತಾಗಿ ದ್ವಿತೀಯ ಬಿ.ಎಸ್ಸಿ. ವಿದ್ಯಾರ್ಥಿನಿ ಲಕ್ಷ್ಮೀ, ತೃತೀಯ ಬಿ. ಕಾಂ. ವಿದ್ಯಾರ್ಥಿನಿ ವಫಾ ಮಾತನಾಡಿದರು.  ವಿದ್ಯಾರ್ಥಿನಿ ರಶ್ಮಿತಾ ಕಲಾಂ ಕುರಿತು ಕವನ ವಾಚಿಸಿದರು. ವಿದ್ಯಾರ್ಥಿನಿಯರಾದ ತ್ರೀಷಾ ಮತ್ತು ಕವಿತಾ ಕಲಾಂ ಅವರ ಕುರಿತಾದ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು.

ಮೋಹಿತ್ ಕಲಾಂ ಅವರ ಚಿತ್ರಕ್ಕೆ ಬಣ್ಣ ತುಂಬಿದರು. ಇದೇ ಸಂದರ್ಭದಲ್ಲಿ ಗ್ರಂಥಪಾಲಕಿ ರೇಖಾ ಕಲಾಂ ಅವರ ಪುಸ್ತಕಗಳ ಪ್ರದರ್ಶನ ಏರ್ಪಡಿಸಿದ್ದರು.   ಕಾಲೇಜಿನ ಪ್ರಾಂಶುಪಾಲ ಡಾ. ವಿನ್ಸೆಂಟ್ ಆಳ್ವ ಅಧ್ಯಕ್ಷತೆ ವಹಿಸಿದ್ದರು.

ಭಾಷಾವಿಭಾಗದ ಡೀನ್ ಪ್ರೊ.ಸೋಫಿಯಾ ಡಯಾಸ್, ವಿದ್ಯಾರ್ಥಿ ಕ್ಷೇಮಾ ಭಿವೃದ್ಧಿ ನಿರ್ದೇಶಕರುಗಳಾದ ಪ್ರೊ.ಕಾರ್ತಿಕ್ ನಾಯಕಂ, ಪ್ರೊ.ಹರಿಣಾಕ್ಷಿ ಎಂ. ಡಿ., ಗ್ರಂಥಪಾಲಕಿ ಪ್ರೊ.ರೇಖಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಐಶ್ವರ್ಯಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News