×
Ad

ಎಚ್.ಎನ್. ಶೃಂಗೇಶ್ವರಗೆ ಯಕ್ಷಚೇತನ ಪ್ರಶಸ್ತಿ

Update: 2022-10-18 20:29 IST
ಶೃಂಗೇಶ್ವರ

ಉಡುಪಿ, ಅ.18: ಮೂರು ದಶಕಗಳ ಕಾಲ ನಿಟ್ಟೂರು ಪ್ರೌಢಶಾಲೆಯ ಅಧ್ಯಾಪಕರಾಗಿ ನಿವೃತ್ತರಾದ, ಪ್ರಾರಂಭ ದಿಂದಲೂ ಯಕ್ಷಗಾನ ಕಲಾರಂಗದ ನಿಷ್ಠಾವಂತ ಕಾರ್ಯಕರ್ತರಾಗಿ ತೊಡಗಿಸಿಕೊಂಡ ಎಚ್.ಎನ್. ಶೃಂಗೇಶ್ವರ ಇವರನ್ನು ಈ ಬಾರಿಯ ಯಕ್ಷಗಾನ ಕಲಾರಂಗದ ಯಕ್ಷಚೇತನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ವಿಜಯಕುಮಾರ್ ಮುದ್ರಾಡಿ ಇವರು ಸ್ಥಾಪಿಸಿದ ಈ ಪ್ರಶಸ್ತಿ ಪ್ರದಾನ ಸಮಾರಂಭ ಮುಂದಿನ ನ.13ರಂದು ಮಂಗಳೂರಿನ ಟೌನ್‌ಹಾಲ್‌ನಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News