×
Ad

ವಿದ್ಯಾರ್ಥಿ ಆತ್ಮಹತ್ಯೆ

Update: 2022-10-18 20:52 IST

ಪಡುಬಿದ್ರೆ, ಅ.18: ಚಲಿಸುತ್ತಿದ್ದ ರೈಲಿಗೆ ತಲೆಗೊಟ್ಟು ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಎಲ್ಲೂರು ಗ್ರಾಮದ ಕೊಳಚ್ಚೂರು ಎಂಬಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.

ಮೃತರನ್ನು ಬೆಳ್ಮಣುವಿನ ಸದಾಶಿವ ಆಚಾರ್ಯ ಎಂಬವರ ಪುತ್ರ, 10ನೆ ತರಗತಿಯ ವಿದ್ಯಾರ್ಥಿ ಆದರ್ಶ (16) ಎಂದು ಗುರುತಿಸಲಾಗಿದೆ.

ಈತ ಸೂಡ ಶಾಲೆಯ 10ನೆ ತರಗತಿಯ ವಿದ್ಯಾರ್ಥಿಯಾಗಿದ್ದು, ಮಾನಸಿಕ ಒತ್ತಡದಿಂದ ಮುಂಬೈಯಿಂದ ಕೂಚುವೇಲಿಗೆ ಹೋಗುತ್ತಿದ್ದ ರೈಲಿಗೆ  ತಲೆಕೊಟ್ಟಿದ್ದು, ಇದರಿಂದ ತಲೆ ಕೈಕಾಲು ಛಿದ್ರಗೊಂಡಿತ್ತು. ಇದರ ಪರಿಣಾಮ ಗಂಭೀರವಾಗಿ ಗಾಯಗೊಂಡ ಆದರ್ಶ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News