×
Ad

ಉತ್ತರಪ್ರದೇಶ: ನಾಪತ್ತೆಯಾಗಿದ್ದ ದಲಿತ ಬಾಲಕಿಯ ಛಿದ್ರವಿಚ್ಛಿದ್ರ ಶವ ಪತ್ತೆ

Update: 2022-10-20 20:52 IST

ಅಝಮ್ಗಡ,ಅ.20: ನಾಪತ್ತೆಯಾಗಿದ್ದ ದಲಿತ ಬಾಲಕಿಯೋರ್ವಳ ಛಿದ್ರವಿಚ್ಛಿದ್ರ ಶವ ಗುರುವಾರ ಉತ್ತರ ಪ್ರದೇಶ(Uttar Pradesh)ದ ಅಝಮ್ಗಡ(Azamgarh)ದಲ್ಲಿ ಪೊದೆಯೊಂದರಲ್ಲಿ ಪತ್ತೆಯಾಗಿದೆ.

ಬಾಲಕಿ ಅ.15ರಿಂದ ನಾಪತ್ತೆಯಾಗಿದ್ದು,ಈ ಬಗ್ಗೆ ಆಕೆಯ ತಂದೆ ಪೊಲೀಸ್ ದೂರನ್ನು ದಾಖಲಿಸಿದ್ದರು.

ಪೊದೆಯೊಂದರಲ್ಲಿ ಬಾಲಕಿಯ ಶವವನ್ನು ಕಂಡ ಮಜೌಲಿ ಗ್ರಾಮಸ್ಥರು (Villagers of Majauli)ನೀಡಿದ್ದ ಮಾಹಿತಿಯ ಮೇರೆಗೆ ಬೆರಳಚ್ಚು ಮತ್ತು ವಿಧಿವಿಜ್ಞಾನ ತಂಡಗಳೊಂದಿಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಲಭ್ಯ ಸಾಕ್ಷಾಧಾರಗಳನ್ನು ಸಂಗ್ರಹಿಸಿದ್ದಾರೆ.

ಶವವನ್ನು ಮಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು,ಎಸ್ಸಿ/ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಪ್ರಕರಣದ ತನಿಖೆಗಾಗಿ ವಿಶೇಷ ತಂಡವೊಂದನ್ನು ರಚಿಸಲಾಗಿದ್ದು, ದುಷ್ಕರ್ಮಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ಅಝಮ್ಗಡ ಎಸ್ಪಿ ರಾಹುಲ್ ರೂಸಿಯಾ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News