ಜನರು ಶುದ್ಧ ಗಾಳಿಯನ್ನು ಉಸಿರಾಡಿಸಲು ಬಿಡಿ: ಸುಪ್ರೀಂ ಕೋರ್ಟ್
ಹೊಸದಿಲ್ಲಿ,ಅ.20: ದೀಪಾವಳಿ(Diwali)ಗೆ ಮುನ್ನ ದಿಲ್ಲಿಯಲ್ಲಿ ಪಟಾಕಿಗಳ ಮೇಲಿನ ನಿಷೇಧವನ್ನು ಹಿಂದೆಗೆದುಕೊಳ್ಳುವಂತೆ ಕೋರಿ ಬಿಜೆಪಿ ಸಂಸದ ಮನೋಜ್ ತಿವಾರಿ(Manoj Tiwari) ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲ(Supreme Court)ಯವು ಗುರುವಾರ ತಿರಸ್ಕರಿಸಿದೆ.
‘ನಿಮ್ಮ ಹಣವನ್ನು ಸಿಹಿತಿಂಡಿಗಳಿಗಾಗಿ ವೆಚ್ಚ ಮಾಡಿ,ಜನರು ಶುದ್ಧ ಗಾಳಿಯನ್ನು ಉಸಿರಾಡಿಸಲು ಬಿಡಿ ’('Spend your money on sweets, let people breathe fresh air') ಎಂದು ನ್ಯಾಯಾಲಯವು ಹೇಳಿತು.
ಚಳಿಗಾಲದಲ್ಲಿ ನಗರದ ವಾಯು ಗುಣಮಟ್ಟವು ಕೆಡುವುದನ್ನು ತಡೆಯಲು ಕಳೆದ ತಿಂಗಳು ದಿಲ್ಲಿ ಸರಕಾರವು ಜ.10ರವರೆಗೆ ಪಟಾಕಿಗಳ ತಯಾರಿಕೆ,ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿತ್ತು.
ತಿವಾರಿ ಅ.10ರಂದು ನಿಷೇಧವನ್ನು ಪ್ರಶ್ನಿಸಿದ್ದರು,ಆದರೆ ಆದೇಶವನ್ನು ಈಗಾಗಲೇ ಹೊರಡಿಸಲಾಗಿದೆ ಎಂದು ಬೆಟ್ಟು ಮಾಡಿದ್ದ ಸರ್ವೋಚ್ಚ ನ್ಯಾಯಾಲಯವು ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲು ನಿರಾಕರಿಸಿತ್ತು.
ಅವು ಹಸಿರು ಪಟಾಕಿಗಳಾಗಿದ್ದರೂ ಅವುಗಳಿಗೆ ನಾವು ಅವಕಾಶ ನೀಡುವುದು ಹೇಗೆ ಸಾಧ್ಯ? ನೀವು ದಿಲ್ಲಿಯ ವಾಯುಮಾಲಿನ್ಯವನ್ನು ನೋಡಿದ್ದೀರಾ ಎಂದು ಸರ್ವೋಚ್ಚ ನ್ಯಾಯಾಲಯವು ಪ್ರಶ್ನಿಸಿತ್ತು.
ದಿಲ್ಲಿ ಸರಕಾರವು ವಾಯುಮಾಲಿನ್ಯವನ್ನು ತಡೆಯಲು ಕಳೆದ ವರ್ಷದ ಸೆಪ್ಟಂಬರ್ ಮತ್ತು ಜನವರಿ ನಡುವೆಯೂ ಪಟಾಕಿಗಳನ್ನು ನಿಷೇಧಿಸಿತ್ತು.