ತಾನು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದೇನೆಂಬ ಪ್ರಶಾಂತ್ ಕಿಶೋರ್ ಹೇಳಿಕೆಗೆ ನಿತೀಶ್ ಕುಮಾರ್ ಪ್ರತಿಕ್ರಿಯಿಸಿದ್ದು ಹೀಗೆ

Update: 2022-10-21 08:15 GMT
Photo:PTI

ಪಾಟ್ನಾ: ತಾನು ಬಿಜೆಪಿಯಿಂದ ದೂರ ಸರಿದ ನಂತರವೂ ಆ ಪಕ್ಷದೊಂದಿಗೆ ಸಂಪರ್ಕದಲ್ಲಿದ್ದೇನೆಂಬ  ಪ್ರಶಾಂತ್ ಕಿಶೋರ್ Prashant Kishor ಆರೋಪಕ್ಕೆ ಕುಟುಕಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ Nitish Kumar ಚುನಾವಣಾ ತಂತ್ರಗಾರ ಕೇವಲ  ಪ್ರಚಾರಕ್ಕಾಗಿ ಮಾತನಾಡುತ್ತಿದ್ದಾನೆ.   ಆತ ಚಿಕ್ಕವ ಹಾಗೂ ಆತ ಏನು ಬೇಕಾದರೂ ಹೇಳುತ್ತಾನೆ ಎಂದು ತಿಳಿಸಿದರು.

"ದಯವಿಟ್ಟು ಅವನ ಬಗ್ಗೆ ಕೇಳಬೇಡಿ. ಆತ ಮಾತನಾಡುತ್ತಲೇ ಇರುತ್ತಾನೆ. ಅವನು ತನ್ನ ಸ್ವಂತ ಪ್ರಚಾರಕ್ಕಾಗಿ ಮಾತನಾಡುತ್ತಾನೆ. ಅವನು ಏನು ಬೇಕಾದರೂ ಹೇಳಬಹುದು, ನಾವು ಹೆದರುವುದಿಲ್ಲ. ನಾನು ಆತನನ್ನು ಗೌರವಿಸುವ ಸಮಯವಿತ್ತು .... ಈಗ ಆತನ ಮನಸ್ಸಿನಲ್ಲಿ ಏನಿದೆ ಎಂದು ಗೊತ್ತಿಲ್ಲ’’ ಎಂದು  ನಿತೀಶ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.

"ಅವನು ಚಿಕ್ಕವನು, ನಾನು ಗೌರವಿಸಿದರೂ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಅದು ನಿಮಗೆಲ್ಲರಿಗೂ ತಿಳಿದಿದೆ’’ ಎಂದರು.

 ಬಿಜೆಪಿಯೊಂದಿಗಿನ ಸಂಬಂಧವನ್ನು ಮುರಿದುಕೊಂಡು ಆಗಸ್ಟ್‌ನಲ್ಲಿ ತೇಜಸ್ವಿ ಯಾದವ್‌ ಅವರ ಆರ್‌ಜೆಡಿಯೊಂದಿಗೆ ಕೈಜೋಡಿಸಿರುವ ನಿತೀಶ್ ಕುಮಾರ್ ಅವರು ಪರಿಸ್ಥಿತಿ ಎದುರಾದರೆ ಮತ್ತೆ ಮಿತ್ರಪಕ್ಷಗಳನ್ನು ಬದಲಾಯಿಸಿಕೊಳ್ಳಬಹುದು ಎಂದು PK ಎಂದೇ ಜನಪ್ರಿಯರಾಗಿರುವ ಪ್ರಶಾಂತ್ ಕಿಶೋರ್ ಹೇಳಿದ್ದರು.

ನಿತೀಶ್ ಕುಮಾರ್ ಅವರು ಬಿಜೆಪಿ ವಿರುದ್ಧ ರಾಷ್ಟ್ರೀಯ ಮೈತ್ರಿಕೂಟವನ್ನು ಸಕ್ರಿಯವಾಗಿ ಕಟ್ಟುತ್ತಿದ್ದಾರೆ ಎಂದು ಯೋಚಿಸುತ್ತಿರುವ ಜನರಿಗೆ ಅವರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ತಿಳಿದರೆ ಆಶ್ಚರ್ಯವಾಗುತ್ತದೆ. ಅವರು ತಮ್ಮ ಪಕ್ಷದ ಸಂಸದ ಹಾಗೂ  ರಾಜ್ಯಸಭಾ ಉಪ ಸಭಾಪತಿ ಹರಿವಂಶ್ ಜಿ ಮೂಲಕ ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಪಿಕೆ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News