ಹೈದರಾಬಾದ್:‌ ನವವಿವಾಹಿತ ವೈದ್ಯ ದಂಪತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

Update: 2022-10-22 05:47 GMT
Photo: ndtv.com

ಹೈದರಾಬಾದ್: ಎರಡು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ  ದಂಪತಿಯೊಂದು ಹೈದರಾಬಾದ್‌ನ (Hyderabad) ಖಾದರ್‌ಬಾಘ್‌ ಪ್ರದೇಶದ ತಮ್ಮ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಗುರುವಾರ ಪತ್ತೆಯಾಗಿದ್ದಾರೆ, ಸ್ನಾನಗೃಹದಲ್ಲಿನ ಗೀಸರ್‌ನಿಂದ (Geyser) ವಿದ್ಯುತ್‌ ಶಾಕ್‌ ತಗಲಿ ಅವರು ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ.

ಮೃತಪಟ್ಟವರನ್ನು ಡಾ. ಸಯ್ಯದ್‌ ನಿಸಾರುದ್ದೀನ್‌ (26) ಮತ್ತು ಅವರ ಪತ್ನಿ ಸೈಮಾ ಎಂದು ಗುರುತಿಸಲಾಗಿದೆ. ಸೈಮಾಗೆ ಮೊದಲು ವಿದ್ಯುತ್‌ ಶಾಕ್‌ ತಗಲಿರಬೇಕೆಂದು ಶಂಕಿಸಲಾಗಿದ್ದು ಆಕೆಯನ್ನು ರಕ್ಷಿಸಲೆಂದು ಧಾವಿಸಿದ ಸಯ್ಯದ್‌ ಅವರಿಗೂ ವಿದ್ಯುದಾಘಾತವಾಗಿ ಇಬ್ಬರೂ ಮೃತಪಟ್ಟಿರಬೇಕೆಂದು ತಿಳಿಯಲಾಗಿದೆ.

ಸೈಮಾ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದರೆ ಸಯ್ಯದ್‌ ನಿಸಾರುದ್ದೀನ್‌ ಸೂರ್ಯಪೇಟೆಯಲ್ಲಿರುವ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ಉದ್ಯೋಗದಲ್ಲಿದ್ದರು.

ಗುರುವಾರ ಬೆಳಿಗ್ಗೆಯಷ್ಟೇ ಸೈಮಾ ತಮ್ಮ ತಂದೆಗೆ ಕರೆ ಮಾಡಿದ್ದರು ಹಾಗೂ ಮತ್ತೆ ಕರೆ ಮಾಡುವುದಾಗಿ ತಿಳಿಸಿದ್ದರು. ಆದರೆ ಆ ಕರೆ ಬರಲೇ ಇಲ್ಲ. ಸಂಜೆ ಮತ್ತೆ ಕುಟುಂಬ ಸದಸ್ಯರು ಕರೆ ಮಾಡಿದಾಗ ಯಾವುದೇ ಉತ್ತರ ದೊರೆಯದೇ ಇದ್ದಾಗ ಮನೆಯ ಬಾಗಿಲು ಒಡೆದು ಪ್ರವೇಶಿಸಿದ್ದರು. ಆಗ ಇಬ್ಬರೂ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಅರುಣಾಚಲ ಪ್ರದೇಶ: ಹೆಲಿಕಾಪ್ಟರ್ ಪತನದಲ್ಲಿ ಕಾಸರಗೋಡಿನ ಸೈನಿಕ ಮೃತ್ಯು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News