`ಗಂಧದ ಗುಡಿ’ ಸಿನೆಮಾ KGF ರೆಕಾರ್ಡ್ಸ್ ಕೂಡ ಬ್ರೇಕ್ ಮಾಡಬೇಕು: ನಟ ಯಶ್

Update: 2022-10-22 07:26 GMT
 ನಟ ಯಶ್

ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ನಡೆದ ನಟ ಪುನೀತ್ ರಾಜ್ ಕುಮಾರ್ (Puneeth Rajkumar) ಅಭಿನಯದ ಕೊನೆಯ ಸಿನೆಮಾ ‘ಗಂಧದ ಗುಡಿ’(Gandhada Gudi) ಪ್ರಿ ರಿಲೀಸ್ ಕಾರ್ಯಕ್ರಮ (ಪುನೀತ್ ಪರ್ವ)ದಲ್ಲಿ ಹಲವು ನಟ, ನಟಿಯರು ಭಾಗಿಯಾಗಿದ್ದು, ಅಕ್ಟೋಬರ್ 28ಕ್ಕೆ ಈ ಸಿನೆಮಾ ಬಿಡುಗಡೆಯಾಗಲಿದೆ. 

ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಯಶ್, 'ಗಂಧದ ಗುಡಿ ಸಿನೆಮಾ ಎಲ್ಲಾ ಸಿನೆಮಾಗಳ ದಾಖಲೆಗಳನ್ನು ಬ್ರೇಕ್ ಮಾಡಬೇಕು' ಎಂದು ಹೇಳಿದ್ದಾರೆ. 

''ನಮ್ಮದೆಲ್ಲಾ ಏನೋ ಸಾಧನೆ ಅನ್ನುವಾಗ, ಸಾಧನೆ ಅಂದರೆ ಇದು ಅನ್ನೋದನ್ನ ಪುನೀತ್ ರಾಜಕುಮಾರ್ ತೋರಿಸಿಕೊಟ್ಟಿದ್ದಾರೆ. ಆ ಉದ್ದೇಶಕ್ಕಾದರೂ ಸಿನೆಮಾ ಗೆಲ್ಲಿಸಬೇಕು ಎಂದ ಯಶ್,  ಪ್ರತಿಯೊಬ್ಬರು ಸಿನೆಮಾ ನೋಡಿ. ಈ ಸಿನೆಮಾ ಮುಂದೆ ಕೆಜಿಎಫ್  ರೆಕಾರ್ಡ್ಸ್ ಕೂಡ ಇರಬಾರದು'' ಎಂದು ಹೇಳಿದ್ದಾರೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News