ಉತ್ತರ ಪ್ರದೇಶ: ವಿದ್ಯುತ್ ಕೈಕೊಟ್ಟ ಕಾರಣ ಡಯಾಲಿಸಿಸ್‌ಗಾಗಿ ಕಾಯುತ್ತಿದ್ದ ಕಿಡ್ನಿ ರೋಗಿ ಮೃತ್ಯು

Update: 2022-10-22 11:18 GMT

ಬಿಜ್ನೋರ್: ಅಮ್ರೋಹ ಜಿಲ್ಲಾಸ್ಪತ್ರೆಯಲ್ಲಿ ವಿದ್ಯುತ್ ಕೈಕೊಟ್ಟ ಕಾರಣ ಡಯಾಲಿಸಿಸ್‌ಗಾಗಿ ಕಾಯುತ್ತಿದ್ದ ಕಿಡ್ನಿ ರೋಗಿಯೊಬ್ಬರು  ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಡಯಾಲಿಸ್ ರೋಗಿಯು  ಕಳೆದ ಎರಡು ವರ್ಷಗಳಿಂದ ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು. ಬುಧವಾರ ಬೆಳಗ್ಗೆಯಿಂದ ಏಕಾಏಕಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ನೀರು ಪೂರೈಕೆಯೂ ಸ್ಥಗಿತಗೊಂಡಿತ್ತು. ಇದರಿಂದಾಗಿ ರೋಗಿಯು ಡಯಾಲಿಸಿಸ್‌ಗೆ ಒಳಗಾಗಲಿಲ್ಲ. ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಬರುವುದನ್ನೇ ಕಾದು ರೋಗಿಯ ಸ್ಥಿತಿ ಹದಗೆಟ್ಟಿತ್ತು. 

ಅಮ್ರೋಹದ ಮೊಹಲ್ಲಾ ಮುಲ್ಲಾನದ ನಿವಾಸಿ ಮುಹಮ್ಮದ್ ಅಮೀರ್ ಕಿರಾಣಿ ಅಂಗಡಿ ನಡೆಸುತ್ತಿದ್ದರು. ಅವರು ಸುಮಾರು ನಾಲ್ಕು ವರ್ಷಗಳಿಂದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದರು ಎಂದು  ಆಂಗ್ಲಪತ್ರಿಕೆಯೊಂದು ವರದಿ ಮಾಡಿದೆ.

ಈ ಹಿಂದೆ ಮೊರಾದಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಮಾಡುತ್ತಿದ್ದರು.. ಇದರಿಂದ ಸಾಕಷ್ಟು ಖರ್ಚುಗಳು ತಗುಲಿದ ಕಾರಣ ಅವರ ಮನೆಯ ಆರ್ಥಿಕ ಸ್ಥಿತಿಯೂ ಹದಗೆಟ್ಟಿತ್ತು.

ಏತನ್ಮಧ್ಯೆ, ಅಮ್ರೋಹಾ ಜಿಲ್ಲಾ ಆಸ್ಪತ್ರೆಯಲ್ಲಿ ಹತ್ತು ಹಾಸಿಗೆಗಳ ಡಯಾಲಿಸಿಸ್ ಘಟಕವನ್ನು ತೆರೆದಾಗ ಅವರು ಎರಡು ವರ್ಷಗಳಿಂದ  ವಾರದಲ್ಲಿ ಎರಡು ಬಾರಿ ಬುಧವಾರ ಮತ್ತು ಶನಿವಾರ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು. ಬುಧವಾರ ಬೆಳಗ್ಗೆ ಏಳು ಗಂಟೆಗೆ ಪತ್ನಿ ಯೊಂದಿಗೆ  ಡಯಾಲಿಸಿಸ್‌ಗಾಗಿ ಜಿಲ್ಲಾಸ್ಪತ್ರೆಗೆ ಆಗಮಿಸಿದಾಗ ತಾಂತ್ರಿಕ ದೋಷದಿಂದ ವಿದ್ಯುತ್‌ ವ್ಯತ್ಯಯ ಉಂಟಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News