ಪತ್ರಕರ್ತ ದಾನಿಶ್ ಸಿದ್ದೀಕಿ ಪರ ಪುಲಿಟ್ಝರ್‌ ಪ್ರಶಸ್ತಿ ಸ್ವೀಕರಿಸಿದ ಅವರ ಪುಟ್ಟ ಮಕ್ಕಳು

Update: 2022-10-22 13:31 GMT
Photo: Twitter/@SupriyaShrinate

ನ್ಯೂಯಾರ್ಕ್‌: ಕಳೆದ ವರ್ಷದ ಜುಲೈ ತಿಂಗಳಿನಲ್ಲಿ ಅಫ್ಘಾನಿಸ್ತಾನದಲ್ಲಿನ ಸಂಘರ್ಷ ಕುರಿತು ವರದಿ ಮಾಡುತ್ತಿರುವ ವೇಳೆ ಬಲಿಯಾದ ರಾಯ್ಟರ್ಸ್‌ (Reuters) ಸುದ್ದಿ ಸಂಸ್ಥೆಯ ಪತ್ರಿಕಾಛಾಯಾಗ್ರಾಹಕ ದಾನಿಶ್ ಸಿದ್ದೀಕಿ (Danish Siddiqui) ಅವರಿಗೆ ನೀಡಲಾಗಿದ್ದ ಪ್ರತಿಷ್ಠಿತ ಪುಲಿಟ್ಝರ್‌ (Pulitzer) ಪ್ರಶಸ್ತಿಯನ್ನು ಅವರ ಪುಟ್ಟ ಮಕ್ಕಳಾದ, 6 ವರ್ಷದ ಯೂನುಸ್‌ ಸಿದ್ದೀಕಿ ಹಾಗೂ 4 ವರ್ಷದ ಸಾರಾ ಸಿದ್ದೀಕಿ ನ್ಯೂಯಾರ್ಕ್‌ನಲ್ಲಿ ನಡೆದ ಹೃದಯಸ್ಪರ್ಶಿ ಸಮಾರಂಭದಲ್ಲಿ ತಂದೆಯ ಪರವಾಗಿ ಸ್ವೀಕರಿಸಿದರು. ರೋಹಿಂಗ್ಯ ನಿರಾಶ್ರಿತರ ಸಮಸ್ಯೆ ಕುರಿತಾದ ಅವರ ಫೀಚರ್‌ ಫೋಟೋಗ್ರಾಫಿಗಾಗಿ ದಾನಿಶ್ ಅವರಿಗೆ 2018 ರ ಪುಲಿಟ್ಝರ್‌ ಪ್ರಶಸ್ತಿ ಘೋಷಿಸಲಾಗಿತ್ತು.

ತಮ್ಮ ಪುತ್ರನಿಗೆ ದೊರಕಿದ್ದ ಪ್ರಶಸ್ತಿಯ ಬಗ್ಗೆ ಪ್ರತಿಕ್ರಿಯಿಸಿದ್ದ ದಾನಿಶ್ ಅವರ ತಂದೆ ಅಖ್ತಾರ್‌ ಸಿದ್ದೀಕಿ, ʻʻದಾನಿಶ್ ಈಗ ನಮ್ಮ ಜೊತೆಗಿಲ್ಲ, ಆದರೆ ಆತ ನಮಗೆ ಹೆಮ್ಮೆ ಮತ್ತು ಸಂತೋಷ ತರುತ್ತಿದ್ದಾನೆ. ಅವನ ಶ್ರಮ, ಕರ್ತವ್ಯನಿಷ್ಠೆ ಮತ್ತು ಮೌಲ್ಯಾಧಾರಿತ ಪತ್ರಿಕೋದ್ಯಮಕ್ಕೆ ಸಂದ ಗೌರವ ಈ ಪ್ರಶಸ್ತಿಯಾಗಿದೆ," ಎಂದು ಹೇಳಿದ್ದರು.

ಇದನ್ನೂ ಓದಿ: ಬೆಂಗಳೂರು: ಕಳ್ಳತನಕ್ಕೆ ಹೋಗಿದ್ದ ಮನೆಯಲ್ಲಿಯೇ ಆತ್ಮಹತ್ಯೆ!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News