ಅ.23ರಂದು ಹೂಡೆಯಲ್ಲಿ ಮಿಲಾದ್ ಆಚರಣೆ
Update: 2022-10-22 20:05 IST
ಉಡುಪಿ, ಅ.22: ಹೂಡೆಯ ಹಜರತ್ ಶೇಖ್ ಸಾದೀರ್ ವಲಿಯುಲ್ಲಾ (ರ.ಅ.) ಅವರ ದರ್ಗಾ ಶರೀಫ್‌ನಲ್ಲಿ ಮಿಲಾದ್ ಆಚರಣೆಯು ಅ.23ರಂದು ನಡೆಯಲಿದೆ.
ಸಂಜೆ 4.30ಕ್ಕೆ ಮೌಲಾನ ಅಬೂಬಕ್ಕರ್ ಲತೀಫಿ ನೇತೃತ್ವದಲ್ಲಿ ಮೌಲುದ್ ಪಾರಾಯಣ ನಡೆಯಲಿದ್ದು, ರಾತ್ರಿ 8.30ಕ್ಕೆ ಸಭಾ ಕಾರ್ಯಕ್ರಮ ಜರಗಲಿದೆ. ಮುಖ್ಯ ಅತಿಥಿಯಾಗಿ ಮುಂಬೈಯ ರುಶ್ನೇ ಮಜ್ಲಿಸ್ ಎ ಶೂರಾ ಸುನ್ನಿ ದಾವತೆಯ ಮೌಲಾನ ಮುಹಮ್ಮದ್ ಸಾದಿಕ್ ರಝ್ವಿ ಕುರ್ಲ ದಿಕ್ಸೂಚಿ ಭಾಷಣ ಮಾಡಲಿರುವರು ಎಂದು ಪ್ರಕಟಣೆ ತಿಳಿಸಿದೆ.