×
Ad

ಕಾಂತಾರದಲ್ಲಿ ಅಭಿನಯಿಸಿದ ಉಡುಪಿ ಕಲಾವಿದರಿಗೆ ಅಭಿನಂದನೆ

Update: 2022-10-22 20:12 IST

ಉಡುಪಿ, ಅ.22: ಕೇದಾರೋತ್ಥಾನ ಟ್ರಸ್ಟ್ ಉಡುಪಿ ಮತ್ತು ಕೇದಾರೋತ್ಥಾನ ರೈತ ಉತ್ಪಾದಕರ ಕಂಪನಿ ಉಡುಪಿ ವತಿಯಿಂದ ಕಾಂತಾರಾ ಚಲನಚಿತ್ರದಲ್ಲಿ ನಟಿಸಿದ ಉಡುಪಿ ಜಿಲ್ಲೆಯ ಪ್ರತಿಭಾನ್ವಿತ ಕಲಾವಿದರನ್ನು ಇಂದು ಸನ್ಮಾನಿಸ ಲಾಯಿತು.

ಉಡುಪಿ ವಿಧಾನಸಭಾ ಕ್ಷೇತ್ರದಾದ್ಯಂತ ಹಡಿಲು ಭೂಮಿ ಕೃಷಿ ಮಾಡಿದ ಗದ್ದೆಗಳಲ್ಲಿನ ಕಳೆಗಳನ್ನು ತೆಗೆಯುವ ಕಾರ್ಯದಲ್ಲಿ ತೊಡಗಿಸಿಕೊಂಡ ತೆಂಕ ನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು, ಅಜ್ಜರಕಾಡು ಡಾ.ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳಿಗೆ ಮಣಿಪಾಲದ ಭಾರತ್ ಸಿನಿಮಾಸ್ ಚಿತ್ರ ಮಂದಿರದಲ್ಲಿ ಕಾಂತಾರ ಚಲನಚಿತ್ರ ವೀಕ್ಷಣೆಗೆ ಟ್ರಸ್ಟ್ ವತಿಯಿಂದ ಉಚಿತ ವ್ಯವಸ್ಥೆ ಮಾಡಲಾಯಿತು. ಶಾಸಕ ಕೆ.ರಘುಪತಿ ಭಟ್ ವಿದ್ಯಾರ್ಥಿಗಳೊಂದಿಗೆ ಕಾಂತಾರಾ ಚಲನಚಿತ್ರ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಕಾಂತಾರಾ ಚಲನಚಿತ್ರದಲ್ಲಿ ನಟಿಸಿದ ಉಡುಪಿ ಜಿಲ್ಲೆಯ ಪ್ರತಿಭಾನ್ವಿತ ಕಲಾವಿದರಾದ ಪ್ರಭಾಕರ್ ಬ್ರಹ್ಮಾವರ, ಭಾಸ್ಕರ್ ಮಣಿಪಾಲ, ಸಂದೀಪ್ ಕುಮಾರ್, ಪ್ರಕಾಶ್ ಉಪ್ಪುಂದ, ರಮಾನಂದ ಬಂಗೇರ, ಚಂದ್ರಕಲಾ ಭಟ್, ಮಾನಸಿ ಸುಧೀರ್, ಶ್ರೀಪಾದ್ ಹೆಗ್ಡೆ, ಉದಯ ಹಾಲಂಬಿ, ಶೇಖರ ಹಾಲಂಬಿ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕೇದಾರೋತ್ಥಾನ ಟ್ರಸ್ಟ್‌ನ ಕೋಶಾಧಿಕಾರಿಗಳಾದ ರಾಘವೇಂದ್ರ ಕಿಣಿ, ಟ್ರಸ್ಟಿಗಳಾದ ಮಹೇಶ್ ಠಾಕೂರ್, ಪ್ರವೀಣ್ ಶೆಟ್ಟಿ ಕಪ್ಪೆಟ್ಟು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News