ಜಮ್ಮು-ಕಾಶ್ಮೀರ: ಸಾಮಾಜಿಕ ಜಾತಿ ಪಟ್ಟಿಗೆ ಹೊಸದಾಗಿ 15 ವರ್ಗಗಳ ಸೇರ್ಪಡೆ

Update: 2022-10-22 16:02 GMT
 Lieutenant Governor Manoj Sinha(PHOTO: PTI)

ಶ್ರೀನಗರ,ಅ.22: ಜಮ್ಮು-ಕಾಶ್ಮೀರದ ಉಪ ರಾಜ್ಯಪಾಲ ಮನೋಜ ಸಿನ್ಹಾ ಅವರು ಜಾಟರು,ಪಶ್ಚಿಮ ಪಾಕಿಸ್ತಾನ ನಿರಾಶ್ರಿತರು, ಗೂರ್ಖಾಗಳಂತಹ 15 ಹೊಸ ವರ್ಗಗಳನ್ನು ಸೇರ್ಪಡೆಗೊಳಿಸುವ ಮೂಲಕ ಸಾಮಾಜಿಕ ಜಾತಿ ಪಟ್ಟಿಯನ್ನು ವಿಸ್ತರಿಸಿದ್ದಾರೆ.

ಜಮ್ಮು-ಕಾಶ್ಮೀರ ಮೀಸಲಾತಿ ನಿಯಮಗಳಡಿ ಸಾಮಾಜಿಕ ಜಾತಿಗಳು ಸರಕಾರಿ ಉದ್ಯೋಗಗಳಲ್ಲಿ ಶೇ.4ರಷ್ಟು ಮೀಸಲಾತಿ ಸೌಲಭ್ಯವನ್ನು ಹೊಂದಿವೆ.

ಸರಕಾರವು 2020ರಲ್ಲಿ ಮಾಜಿ ಹೈಕೋರ್ಟ್ ನ್ಯಾಯಾಧೀಶ ಜಿ.ಡಿ.ಶರ್ಮಾರ ನೇತೃತ್ವದಲ್ಲಿ ರಚಿಸಿದ್ದ ಜಮ್ಮು-ಕಾಶ್ಮೀರ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸಿನ ಮೇರೆಗೆ ಸಾಮಾಜಿಕ ಜಾತಿ ಪಟ್ಟಿಯನ್ನು ಮರುರಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News