ಬ್ರಹ್ಮಾವರ: ರವಿವಾರವೂ ಇರಲಿವೆ ಕೃಷಿ ಮಹೋತ್ಸವದ ಮಳಿಗೆಗಳು
Update: 2022-10-22 21:44 IST
ಬ್ರಹ್ಮಾವರ: ಇಲ್ಲಿನ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನ ಕೇಂದ್ರದಲ್ಲಿ ಇಂದು ನಡೆದ ಕೃಷಿ ಮಹೋತ್ಸವದಲ್ಲಿದ್ದ ಪ್ರದರ್ಶನ ಮಳಿಗೆಗಳು ಸಾರ್ವಜನಿಕರ ಒತ್ತಾಯದ ಮೇರೆಗೆ ನಾಳೆ ಅ.23ರ ರವಿವಾರವೂ ಮುಂದುವರಿಯಲಿದೆ ಎಂದು ಕೆವಿಕೆ ಪ್ರಕಟಣೆಯಲ್ಲಿ ತಿಳಿಸಿದೆ.
ಹೀಗಾಗಿ ಆಸಕ್ತ ಸಾರ್ವಜನಿಕರು, ವಿದ್ಯಾರ್ಥಿಗಳು, ರೈತರು ಹಾಗೂ ಕೃಷಿಯಾಸಕ್ತರು ಕೃಷಿ ಮಹೋತ್ಸವದ ವಸ್ತು ಪ್ರದರ್ಶನ ಮಳಿಗೆಗಳನ್ನು ನಾಳೆಯೂ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಆವರಣದಲ್ಲಿ ಸಂದರ್ಶಿಸಬಹುದು ಎಂದು ಪ್ರಕಟಣೆ ತಿಳಿಸಿದೆ.