×
Ad

ಅಲ್ಟಿಮೇಟ್ ಫೈಟಿಂಗ್ ಚಾಂಪಿಯನ್ ಶಿಪ್: ಇಸ್ಲಾಮ್ ಮಖಾಚೇವ್ ನೂತನ ಲೈಟ್ ವೇಟ್ ಚಾಂಪಿಯನ್

Update: 2022-10-23 10:15 IST
Photo: twitter.com/UFC_AUSNZ

ಅಬುಧಾಬಿ: ಅಲ್ಟಿಮೇಟ್ ಫೈಟಿಂಗ್ ಚಾಂಪಿಯನ್ ಶಿಪ್ ನಲ್ಲಿ(UFC )ರಶ್ಯದ ವೃತ್ತಿಪರ ಮಿಕ್ಸೆಡ್ ಮಾರ್ಷಲ್ ಆರ್ಟಿಸ್ಟ್ ಇಸ್ಲಾಮ್ ಮಖಾಚೇವ್ Islam Makhachev ಅವರು ಶನಿವಾರ  ಬ್ರೆಝಿಲ್ ನ  ಚಾರ್ಲ್ಸ್ ಒಲಿವೇರಾ Charles Oliveira ಅವರನ್ನು ಮಣಿಸಿ ಯುಎಫ್ ಸಿ 280 ಪುರುಷರ  ಲೈಟ್ವೇಟ್  ಚಾಂಪಿಯನ್ ಆಗಿ ಹೊರಹೊಮ್ಮಿದರು. 

ಮಖಾಚೇವ್ ಅವರು ಬ್ರೆಝಿ ಲ್ ನ ಒಲಿವೇರಾ ವಿರುದ್ಧ ಅದ್ಭುತ ಗೆಲುವು ಸಾಧಿಸಿದರು. 

ನೂತನ ಚಾಂಪಿಯನ್ ಮಖಾಚೇವ್ ಅವರು ತಾನು ಗೆದ್ದಿರುವ  ಬೆಲ್ಟ್ ಅನ್ನು  ಮಾಜಿ ಚಾಂಪಿಯನ್, ಹಾಲಿ ಕೋಚ್ ಖಬೀಬ್ ಗೆ ನೀಡಿದರು. 
"ಖಬೀಬ್ ಹಾಗೂ ಅವರ ತಂದೆಯೇ ನನ್ನನ್ನು ರೂಪಿಸಿದ್ದು" ಎಂದು ಇಸ್ಲಾಮ್ ಮಖಾಚೇವ್ ಸ್ಮರಿಸಿದರು.

2020 ರಲ್ಲಿ ನಿಧನರಾದ ತಮ್ಮ ಕೋಚ್ ಅಬ್ದುಲ್ ಮನಾಪ್ ಅವರಿಗೆ ಮಖಾಚೇವ್ ಅವರು ಗೆಲುವನ್ನು ಅರ್ಪಿಸಿದರು.

"ಹಲವು ವರ್ಷಗಳ ಹಿಂದೆ ಕಠಿಣ ತರಬೇತಿ ಪಡೆದರೆ ನೀನು ಚಾಂಪಿಯನ್ ಆಗುತ್ತಿಯಾ" ಎಂದು ನಿಮ್ಮ ತಂದೆ ನನಗೆ ಹೇಳಿದ್ದರು ಎಂದು  ಬೆಲ್ಟ್ ಅನ್ನು ಖಬೀಬ್ ಅವರಿಗೆ ಹಸ್ತಾಂತರಿಸುವ ಮೊದಲು ಮಖಾಚೇವ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News