×
Ad

ಟ್ವೆಂಟಿ-20 ವಿಶ್ವಕಪ್ : ಪಾಕ್ ವಿರುದ್ಧ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ

Update: 2022-10-23 13:06 IST
Photo:twitter

ಮೆಲ್ಬೋರ್ನ್ : ಆಸ್ಟ್ರೇಲಿಯದಲ್ಲಿ ನಡೆಯುತ್ತಿರುವ ಟ್ವೆಂಟಿ-20  ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಸೂಪರ್ 12ರ ಗ್ರೂಪ್-2ರ  ಪಂದ್ಯದಲ್ಲಿ ರವಿವಾರ ಟಾಸ್ ಜಯಿಸಿದ ಭಾರತದ ನಾಯಕ ರೋಹಿತ್ ಶರ್ಮಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.

ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಸಾಂಪ್ರದಾಯಿಕ ಎದುರಾಳಿಗಳು ರವಿವಾರ ಮುಖಾಮುಖಿಯಾಗಲಿವೆ. ಮೆಲ್ಬೋರ್ನ್‌ನಲ್ಲಿ ಆಕಾಶ ತಿಳಿಯಾಗಿದ್ದು ಮಳೆ ಭೀತಿ ದೂರವಾಗಿದೆ.  ಸಂಪೂರ್ಣ 40-ಓವರ್‌ಗಳ ಪಂದ್ಯವನ್ನು ನಿರೀಕ್ಷಿಸಬಹುದಾಗಿದೆ.

 ರೋಹಿತ್ ಶರ್ಮಾ ನೇತೃತ್ವದ ತಂಡವು ಕಳೆದ ವರ್ಷದ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಕೈಯಲ್ಲಿ ಮೊದಲ ಬಾರಿ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಿದೆ.

ಭಾರತ ತಂಡದಲ್ಲಿ ಯಜುವೇಂದ್ರ ಚಹಾಲ್ ಹಾಗೂ ಹರ್ಷಲ್ ಪಟೇಲ್ ಸ್ಥಾನಕ್ಕೆ ಹಿರಿಯ ಬೌಲರ್ ಗಳಾದ ಆರ್. ಅಶ್ವಿನ್ ಹಾಗೂ ಮುಹಮ್ಮದ್ ಶಮಿಗೆ ಆಡುವ 11ರ ಬಳಗದಲ್ಲಿ ಅವಕಾಶ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News