ತಲ್ಲೂರು: ಕೋಟೆಬಾಗಿಲಿನಲ್ಲಿ ಪ.ಜಾತಿ-ಪಂಗಡದ ಕುಂದುಕೊರತೆ ಸಭೆ
ಕುಂದಾಪುರ, ಅ.23: ಕುಂದಾಪುರ ಪೋಲಿಸ್ ಠಾಣೆ ವತಿಯಿಂದ ಪರಿಶಿಷ್ಟ ಜಾತಿ/ಪಂಗಡದ ಮಾಸಿಕ ಕುಂದು ಕೊರತೆ ಸಭೆಯನ್ನು ತಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಟೆಬಾಗಿಲಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರವಿವಾರ ಹಮ್ಮಿಕೊಳ್ಳಲಾಗಿತ್ತು.
ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಠಾಣಾಧಿಕಾರಿ ಸದಾಶಿವ ಗವರೋಜಿ ಮಾತನಾಡಿ, ಈ ಭಾಗದಲ್ಲಿ ಗಾಂಜಾ ಸೇವನೆಯ ಕುರಿತು ಮಾಹಿತಿ ಇದ್ದು ಯುವಕರು ಮಾದಕ ವ್ಯಸನದಿಂದ ದೂರವಿರುವ ಜೊತೆಗೆ ಜಾಗೃತಾರಾಗಬೇಕು. ದುರಭ್ಯಾಸ ಇರುವವರು ಅದರಿಂದ ಹೊರ ಬಂದು ಹೊಸಜೀವನ ನಡೆಸಿ ಇಲ್ಲವೆಂದಾದರೆ ಕಾನೂನು ನಿಮಗೆ ಶಿಕ್ಷೆ ವಿಧಿಸುತ್ತೆ ಎಂದರು.
ತಲ್ಲೂರು ಗ್ರಾಮ ಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಹಾಗೂ ದಲಿತ ಮುಖಂಡ ಉದಯ್ ಕುಮಾರ್ ತಲ್ಲೂರು ಮಾತಾನಾಡಿ, ಇಂದು ಪೊಲೀಸರು ನಮ್ಮ ಕಾಲನಿಗೆ ಬಂದು ಸಭೆ ನಡೆಸಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.
ಅಪರಾದ ಪತ್ತೆದಳದ ಠಾಣಾಧಿಕಾರಿ ಪ್ರಸಾದ ಮಾತನಾಡಿ, ಗ್ರಾಮದಲ್ಲಿ ನಡೆಯುವ ಕಳ್ಳತನದ ಬಗ್ಗೆ ಎಚ್ಚರಿಕೆ ವಹಿಸುವಂತೆ ತಿಳಿಸಿದರು. ಸಭೆಯಲ್ಲಿ ಬೀಟ್ ಪೊಲೀಸ್ ಅಶ್ವಿನ್, ಗ್ರಾಪಂ ಸದಸ್ಯ ಅಕ್ಷಯ್, ಎಸ್‌ಡಿಎಂಸಿ ಅಧ್ಯಕ್ಷ ರಮೇಶ್, ದಲಿತ ಮುಖಂಡರಾದ ಪ್ರೇಮಾನಂದ ಕೆ., ಮಂಜು ಟಿ., ಚಂದ್ರಮ ತಲ್ಲೂರು, ರಾಜೇಶ್ ಕೆ.ಎಂ, ಉದಯ್ ಕೋಟೆಬಾಗಿಲು, ಉಮೇಶ್, ಮಂಜು, ವಿಜೇಂದ್ರ ಹಾಗೂ ಅಂಗನಾವಾಡಿ ಶಿಕ್ಷಕಿಯರಾದ ಜ್ಯೋತಿ, ಗೀತಾ ಉಪಸ್ಥಿತಿರಿದ್ದರು. ಸುಕನ್ಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.