ಬ್ರಿಟನ್‍ ಪ್ರಧಾನಿ ಹುದ್ದೆ ರೇಸ್‍ನಿಂದ ಹಿಂದೆ ಸರಿದ ಬೋರಿಸ್ ಜಾನ್ಸನ್; ರಿಷಿ ಸುನಕ್‍ಗೆ ವ್ಯಾಪಕ ಬೆಂಬಲ

Update: 2022-10-24 01:57 GMT
ರಿಷಿ ಸುನಕ್‍ - ಬೋರಿಸ್ ಜಾನ್ಸನ್

ಲಂಡನ್ : ಬ್ರಿಟನ್‍ನ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ (Boris Johnson), ಪ್ರಧಾನಿ (prime minister) ಹುದ್ದೆ ರೇಸ್‍ನಿಂದ ಹಿಂದೆ ಸರಿದಿರುವುದಾಗಿ ಪ್ರಕಟಿಸಿದ್ದಾರೆ. ಈ ಹಿನ್ನೆಲೆಯಲ್ಲಿ 100ಕ್ಕೂ ಹೆಚ್ಚು ಮಂದಿ ಟೋರಿ ಸಂಸದರ ಬೆಂಬಲ ಹೊಂದಿರುವ ಭಾರತೀಯ ಮೂಲದ ರಿಷಿ ಸುನಕ್ (Rishi Sunak) ಅವರು ಪ್ರಧಾನಿ ಹುದ್ದೆಗೆ ಕನ್ಸರ್ವೇಟಿವ್ ಪಾರ್ಟಿ (Conservative Party)ಯ ಅಭ್ಯರ್ಥಿಯಾಗಿ ಆಯ್ಕೆಯಾಗುವ ಸಾಧ್ಯತೆ ನಿಚ್ಚಳವಾಗಿದೆ ಎಂದು hindustantimes.com ವರದಿ ಮಾಡಿದೆ.

ಪ್ರಧಾನಿ ಹುದ್ದೆ ರೇಸ್‍ನಲ್ಲಿ ಗೆದ್ದವರು ಹಾಲಿ ಪ್ರಧಾನಿ ಲಿಝ್ ಟ್ರುಸ್ ಅವರ ಉತ್ತರಾಧಿಕಾರಿಯಾಗಲಿದ್ದಾರೆ. ತಮಗೆ 102 ಸಂಸದರ ಬೆಂಬಲ ಇದೆ ಎಂದು ಬೋರಿಸ್ ಜಾನ್ಸನ್ ಹೇಳಿಕೊಂಡಿದ್ದಾರೆ. ಆದರೆ ಇದು ಸೂಕ್ತ ಸಮಯವಲ್ಲ ಎಂಬ ಕಾರಣಕ್ಕೆ ತಾವು ಸ್ಪರ್ಧೆಯಿಂದ ಹಿಂದೆ ಸರಿಯುತ್ತಿರುವುದಾಗಿ ಅವರು ಪ್ರಕಟಿಸಿದ್ದಾರೆ.

ಇದರಿಂದಾಗಿ ಪಕ್ಷದ ನಾಯಕತ್ವದ ರೇಸ್‍ನಲ್ಲಿ ರಿಷಿ ಸುನಕ್ ಮತ್ತು ಪೆನ್ನಿ ಮಾಂಡ್ರಂಟ್ ಅವರಷ್ಟೇ ಉಳಿದುಕೊಂಡಿದ್ದಾರೆ. ಗೆಲ್ಲುವ ನೆಚ್ಚಿನ ಅಭ್ಯರ್ಥಿಯಾದ ಸುನಕ್, ನಾಮನಿರ್ದೇಶನಗೊಳ್ಳಲು ಅಗತ್ಯವಿರುವ ಸಂಖ್ಯೆಗಿಂತ ಅಧಿಕ ಅಂದರೆ 147 ಸಂಸದರ ಬೆಂಬಲ ಹೊಂದಿದ್ದಾರೆ ಎನ್ನಲಾಗಿದೆ. ನಾಮನಿರ್ದೇಶನಗೊಳ್ಳಲು 100 ಸಂಸದರ ಬೆಂಬಲ ಅಗತ್ಯವಿದೆ.

ಮಾಜಿ ಸಂಪುಟದರ್ಜೆ ಸಚಿವ ಪೆನ್ನಿ ಮಾಡ್ರಂಟ್, ಪ್ರಧಾನಿ ಹುದ್ದೆ ರೇಸ್‍ಗೆ ಧುಮುಕಿದ ಪ್ರಥಮ ಅಭ್ಯರ್ಥಿಯಾಗಿದ್ದು, ತಾನು ಗೆಲ್ಲುವ ಸಲುವಾಗಿಯೇ ಸ್ಪರ್ಧೆಗೆ ಧುಮುಕಿದ್ದಾಗಿ ಹೇಳಿದ್ದಾರೆ. ಆದರೆ ಕೇವಲ 24 ಮಂದಿ ಸಂಸದರ ಬೆಂಬಲ ಮಾತ್ರ ಅವರಿಗೆ ಇದೆ.

ಸೋಮವಾರದ ಒಳಗಾಗಿ ಹೊಸ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಉದ್ದೇಶವನ್ನು ಕನ್ಸರ್ವೇಟಿವ್ ಪಾರ್ಟಿ ಹೊಂದಿದೆ. ಈ ಬಗ್ಗೆ hindustantimes.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News