×
Ad

ದಿಲ್ಲಿ ಹೊಟೇಲ್ ನಲ್ಲಿ ಜೂಜಾಡುತ್ತಿದ್ದ 29 ಮಂದಿಯ ಬಂಧನ: 58 ಲಕ್ಷ ರೂ. ವಶ

Update: 2022-10-24 09:56 IST
Photo:PTI

ಹೊಸದಿಲ್ಲಿ: ಪಂಜಾಬಿ ಬಾಗ್ ಕ್ಲಬ್ ರಸ್ತೆಯಲ್ಲಿರುವ ಹೋಟೆಲ್ ಸಿಟಿ ವೆಸ್ಟ್ ಎಂಡ್‌ನಲ್ಲಿ ಜೂಜಾಟದಲ್ಲಿ ತೊಡಗಿದ್ದ ಏಳು ಮಹಿಳೆಯರು ಸೇರಿದಂತೆ 29 ಜನರನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ರವಿವಾರ ತಿಳಿಸಿದ್ದಾರೆ.

58.57 ಲಕ್ಷ ರೂ. ನಗದು ಹಾಗೂ 10 ಇಸ್ಪೀಟು ಎಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೀಪಾವಳಿ ಸಂದರ್ಭದಲ್ಲಿ ಜೂಜಾಟ ನಡೆಯುವುದನ್ನು ಗಮನದಲ್ಲಿಟ್ಟುಕೊಂಡು, ಪ್ರತಿ ವರ್ಷದಂತೆ, ಎಲ್ಲಾ ಎಸ್‌ಎಚ್‌ಒಗಳು ಮತ್ತು ಕಾರ್ಯಾಚರಣೆ ತಂಡಗಳಿಗೆ ಅಂತಹ ಚಟುವಟಿಕೆಗಳನ್ನು ಗುರುತಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಡಿಸಿಪಿ ಘನಶ್ಯಾಮ್ ಬನ್ಸಾಲ್ ಹೇಳಿದರು.

"ಕ್ಲಬ್ ರೋಡ್ ಪಂಜಾಬಿ ಬಾಗ್‌ನಲ್ಲಿರುವ ಹೋಟೆಲ್ ಸಿಟಿ ವೆಸ್ಟ್ ಎಂಡ್‌ನಲ್ಲಿ ದೊಡ್ಡ ಪ್ರಮಾಣದ ಜೂಜಾಟವು ನಿತ್ಯದ ವ್ಯವಹಾರವಾಗಿದೆ ಎಂದು ಮೂಲವೊಂದು ತಿಳಿಸಿದೆ

“ವಿಚಾರಣೆ ನಡೆಸಿದಾಗ, ಹೋಟೆಲ್ ವ್ಯವಸ್ಥಾಪಕನು  ತನ್ನ ಹೋಟೆಲ್ ಆವರಣವನ್ನು ಜೂಜಾಟದ ಚಟುವಟಿಕೆಗಳಿಗೆ ಅನುಮತಿಸಲು , ಆಹಾರ ಮತ್ತು ತಿಂಡಿಗಳನ್ನು ನೀಡಲು  2,500 ರೂ. ಪ್ರವೇಶ ಶುಲ್ಕವನ್ನು ಪಡೆಯುತ್ತಿದ್ದ ಎಂದು ತಿಳಿದುಬಂದಿದೆ”ಎಂದು ಅಧಿಕಾರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News