×
Ad

ಹಾವಂಜೆ: ವಾರಾಹಿ ಯೋಜನೆಯ ಪೈಪ್ ಬದಲಾವಣೆಗೆ ಆಗ್ರಹ

Update: 2022-10-24 18:59 IST

ಉಡುಪಿ, ಅ.24: ವಾರಾಹಿಯಿಂದ ನಗರಕ್ಕೆ ನೀರು ಸರಬರಾಜು ಮಾಡುವ ಯೋಜನೆಗೆ ಹಾಕಿರುವ ಸಣ್ಣ ಪೈಪ್ ಬದಲಾಯಿಸಿ ದೊಡ್ಡ ಪೈಪ್ ಅಳವಡಿಸು ವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಹಾವಂಜೆ ಗ್ರಾಮದ ಕೀಳಂಜೆಯ ರಿಂಗ್ ರೋಡಿನಲ್ಲಿ ಕುಡಿಯುವ ನೀರಿಗೆ ಅಳವಡಿಸಲಾಗುತ್ತಿರುವ ಪೈಪಿನ ಗಾತ್ರ ಬಹಳ ಚಿಕ್ಕದಾಗಿವೆ. ಈ ಪರಿಸರದಲ್ಲಿ ಸುಮಾರು ನೂರಕ್ಕೂ ಹೆಚ್ಚು ಮನೆಗಳಿದ್ದು, ಆಳೆತ್ತರದ ಗುಂಡಿ ತೋಡಿ ಸಣ್ಣ ಸುತ್ತಳತೆಯ ಪೈಪುಗಳನ್ನು ಅಳವಡಿಸಿದ್ದು ಕಂಡು ಬರುತ್ತಿದೆ. ಈ ಪೈಪ್ ಮತ್ತು ಗುಂಡಿ ತೋಡಲು ಎರಡೆರಡು ಬೃಹತ್ ಜೆಸಿಬಿ ಬಳಸಲಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ಸಣ್ಣ ಗಾತ್ರದ ಪೈಪು ಅಳವಡಿಸುವುದರಿಂದ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಅಲ್ಲದೆ ಎತ್ತರದ ಪ್ರದೇಶಕ್ಕೆ ನೀರು ಹರಿಯುವುದು ಸಂಶಯ ಮೂಡುತ್ತದೆ. ಆದುದರಿಂದ ಸಂಬಂಧಪಟ್ಟವರು ಕೂಡಲೇ ದೊಡ್ಡ ಸಣ್ಣ ಪೈಪುಗಳನ್ನ ಬದಲಾಯಿಸಿ ದೊಡ್ಡಗಾತ್ರದ ಪೈಪುಗಳನ್ನು ಅಳವಡಿಸಬೇಕು. ಈ ಭಾಗದಲ್ಲಿ ನೀರಿನ ಸಮಸ್ಯೆ ಇರುವುದರಿಂದ ಹಾಗೂ ಸೂಕ್ತ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಬೇಕು ಎಂದು ಸ್ಥಳೀಯರಾದ  ಜಯ ಶೆಟ್ಟಿ ಬನ್ನಂಜೆ, ವಾಲ್ಟರ್ ಡಿಸೋಜಾ ಕೊಳಲಗಿರಿ, ಸುಧಾಕರ್ ಪೂಜಾರಿ. ಕೀಳಂಜೆ, ಶಶಿ ಪೂಜಾರಿ ಕೀಳಂಜೆ ಒತ್ತಾಯಿಸಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಮತ್ತು ಪೈಪಿನ ಸುತ್ತಳತೆ ಪರಿಶೀಲಿಸಿ ದೊಡ್ಡ ಗಾತ್ರದ ಸುತ್ತಳತೆಯ ಪೈಪನ್ನು ಅಳವಡಿಸಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸುವ ಕಾರ್ಯ ಮಾಡಬೇಕು. ಇದೀಗ ಈ ಕಾಮಗಾರಿ ಆರಂಭದ ಹಂತದಲ್ಲಿದ್ದು ಇದನ್ನು ಕೂಡಲೇ ಸರಿಪಡಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News