ವಕೀಲರ ಕಚೇರಿಯಲ್ಲಿ ಬೆಂಕಿ ಅನಾಹುತ: ಅಪಾರ ನಷ್ಟ
Update: 2022-10-24 20:51 IST
ಉಡುಪಿ, ಅ.24: ನಗರದ ವಾಸುಕೀ ಟವರ್‌ನ ಎರಡನೇ ಮಹಡಿಯಲ್ಲಿ ರುವ ವಕೀಲರ ಕಚೇರಿಯಲ್ಲಿ ಇಂದು ಬೆಳಗ್ಗೆ ಬೆಂಕಿ ಅನಾಹುತದಿಂದ ಸೊತ್ತುಗಳು ಹಾನಿಯಾಗಿ ಲಕ್ಷಾಂತರ ರೂ. ನಷ್ಟ ಉಂಟಾಗಿರುವ ಬಗ್ಗೆ ವರದಿ ಯಾಗಿದೆ.
ಶಟರ್ ಹಾಕಲಾಗಿದ್ದ ವಕೀಲರೊಬ್ಬರ ಕಚೇರಿಯಲ್ಲಿ ಶಾರ್ಟ್ ಸಕ್ಯೂರ್ಟ್ ನಿಂದ ಬೆಂಕಿ ಕಾಣಿಸಿಕೊಂಡಿತ್ತೆನ್ನ ಲಾಗಿದೆ. ಕಚೇರಿಯಲ್ಲಿದ್ದ ಪೇಪರ್‌ಗೆ ಬೆಂಕಿ ಹತ್ತಿ ಕೊಂಡು ಕಚೇರಿಯಲ್ಲಿದ್ದ ಮೂರು ಕಂಪ್ಯೂಟರ್, ಲ್ಯಾಪ್‌ಟಾಪ್, ಕುರ್ಚಿ ಸೇರಿದಂತೆ ಪಿಠೋಪಕರಣಗಳು ಸುಟ್ಟು ಹೋಗಿವೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ನಡೆಸಿದರು. ಈ ಬೆಂಕಿ ಅನಾಹುತದಿಂದ ಸುಮಾರು ೪.೫ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.