ಬ್ರಹ್ಮಾವರ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು
Update: 2022-10-24 20:57 IST
ಬ್ರಹ್ಮಾವರ: ಬಾರಕೂರು ರಂಗನಕೆರೆ ಎಂಬಲ್ಲಿ ಅ.22ರಂದು ರಾತ್ರಿ ವೇಳೆ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಉದಯ್ ಕುಮಾರ್ ಎಂಬವರು ಬೆಂಗಳೂರಿನಲ್ಲಿದ್ದು, ಅವರ ಹೆಂಡತಿ ಮತ್ತು ಮಗ ಗರಡಿಮಜಲಿನಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದಾಗ ಮನೆಯ ಬೀಗ ಮುರಿದು ಒಳನುಗ್ಗಿ, ಬೆಡ್‌ರೂಮಿನ ಬೀರುವಿನಲ್ಲಿ ಟ್ಟಿದ್ದ ಚಿನ್ನದ ರೋಪ್ ಚೈನುಗಳು, ಹಸಿರು ಬಣ್ಣದ ಹರಳುಗಳಿರುವ ಪದಕ, ಮುತ್ತಿನ ಜುಮಕಿ ಬೆಂಟೋಲೆ, ಬಳೆಗಳನ್ನು ಕಳವು ಮಾಡಿರುವುದಾಗಿ ದೂರಲಾಗಿದೆ. ಇವುಗಳ ಒಟ್ಟು ಮೌಲ್ಯ 1.50 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.