ಚಳಿಗಾಲ ಸಮೀಪಿಸುತ್ತಿದ್ದಂತೆಯೇ ಕೋವಿಡ್ ಪ್ರಕರಣ ಹೆಚ್ಚಳ: ವಿಶ್ವ ಆರೋಗ್ಯ ಸಂಸ್ಥೆ ಕಳವಳ

Update: 2022-10-24 17:23 GMT
Photo : WHO

ಕೋಪನ್ಹೇಗನ್, ಅ.24: ಚಳಿಗಾಲ ಸಮೀಪಿಸುತ್ತಿರುವಂತೆಯೇ ಯುರೋಪ್ ನಲ್ಲಿ ಕೋವಿಡ್ ಸೋಂಕು ಹಾಗೂ ಫ್ಲೂ ಜ್ವರದ ಪ್ರಕರಣ ದಿಢೀರನೆ ಹೆಚ್ಚಳವಾಗುತ್ತಿದ್ದು ವಿಶ್ವದಾದ್ಯಂತ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ(World Health Organization) ಸೋಮವಾರ ಹೇಳಿದೆ.

ಇದು ವಿರಾಮ ಪಡೆಯುವ ಸಮಯವಲ್ಲ. ಎಚ್ಚರಿಕೆ ವಹಿಸಬೇಕಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಯುರೋಪ್ ನಿರ್ದೇಶಕ ಹ್ಯಾನ್ಸ್ ಕ್ಲೂಜ್(Hans Kluge) ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ. ಮಧ್ಯ ಏಶ್ಯಾದ ದೇಶಗಳು ಮತ್ತು ರಶ್ಯವನ್ನು ಒಳಗೊಂಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಯುರೋಪ್ ವಲಯದ 53 ದೇಶಗಳು ಮತ್ತೊಮ್ಮೆ ಕೋವಿಡ್-19 ಸಾಂಕ್ರಾಮಿಕದ ಕೇಂದ್ರಬಿಂದುವಾಗಿದ್ದು ವಿಶ್ವದಾದ್ಯಂತದ  ಸುಮಾರು 60%ದಷ್ಟು ಹೊಸ ಕೋವಿಡ್ ಪ್ರಕರಣಗಳಿಗೆ ಕಾರಣವಾಗಿದೆ. ಇದೇ ಸಂದರ್ಭ ಫ್ಲೂ ಸಾಂಕ್ರಾಮಿಕದ ಪ್ರಕರಣವೂ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ ಎಂದು ಕ್ಲೂಜ್ ಹೇಳಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯು ಅಕ್ಟೋಬರ್ 24ನ್ನು  ವಿಶ್ವ ಪೋಲಿಯೊ ದಿನವೆಂದು ಆಚರಿಸಲಾಗುತ್ತಿದೆ. ಪ್ನಲ್ಲಿ 20  ವರ್ಷಕ್ಕೂ ಅಧಿಕ ಸಮಯದಿಂದ ಪೋಲಿಯೊ ಪ್ರಕರಣ ಪತ್ತೆಯಾಗಿಲ್ಲ ಎಂಬುದು ಗಮನಾರ್ಹ ವಿಷಯ. ಆದರೆ    ವಿಶ್ವದಾದ್ಯಂತ ಪೋಲಿಯೊ ಲಸಿಕೆಯ ಮೂರನೇ ಡೋಸ್ನ  100% ಗುರಿ ಸಾಧಿಸುವ ನಿಟ್ಟಿನಲ್ಲಿ ಇನ್ನಷ್ಟು ಶ್ರಮ ವಹಿಸಬೇಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News