ತಾತ್ಕಾಲಿಕವಾಗಿ ಸ್ಥಗಿತಗೊಂಡ ವಾಟ್ಸಾಪ್:‌ ಬಳಕೆದಾರರಿಗೆ ಗೊಂದಲ

Update: 2022-10-25 09:25 GMT

People Coming to Twitter to see if WhatsApp is down#WhatsappDown pic.twitter.com/eGi25KiQhU

— Bella Ciao (Chai) (@punjabiii_munda) October 25, 2022

ಹೊಸದಿಲ್ಲಿ: ಜನಸಾಮಾನ್ಯರ ದಿನಬಳಕೆಯ ಸಂವನ ವಸ್ತುವಾಗಿ ಮಾರ್ಪಟ್ಟಿರುವ ವಾಟ್ಸಾಪ್‌ ಸದ್ಯ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಯಾವುದೇ ಮೆಸೇಜ್‌ ಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ ಎಂದು ಹಲವಾರು ಭಾರತೀಯ ಬಳಕೆದಾರರು ಟ್ವಿಟರ್‌ ನಲ್ಲಿ ದೂರಿಕೊಂಡಿದ್ದಾರೆ. ಭಾರತದ ಹಲವು ನಗರಗಳಲ್ಲಿ ಈ ತೊಂದರೆ ಕಾಣಿಸಿಕೊಂಡಿದೆ.

ಈ ಹಿಂದೆಯೂ ಕೆಲ ಬಾರಿ ವಾಟ್ಸಪ್‌ ಸರ್ವರ್‌ ಡೌನ್‌ ಆಗಿದ್ದು, ಕೆಲ ಸಮಯಗಳ ಬಳಿಕ ಅದನ್ನು ಮರುಸ್ಥಾಪಿಸಲಾಗಿತ್ತು. #whatsappdown ಸದ್ಯ ಸಾಮಾಜಿಕ ತಾಣದಲಲಿ ಟ್ರೆಂಡಿಂಗ್‌ ಆಗಿದ್ದು, ಹಲವು ಟ್ವಿಟರ್‌ ಬಳಕೆದಾರರು ತಮಾಷೆಯ ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಕುರಿತು ವಾಟ್ಸಾಪ್‌ ಇದುವರೆಗೂ ಯಾವುದೇ ಅಧಿಕೃತ ಹೇಳಿಕೆಯನ್ನು ಪ್ರಕಟಿಸಿಲ್ಲ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News