×
Ad

ಸ್ಥಗಿತಗೊಂಡಿದ್ದ ವಾಟ್ಸ್ ಆ್ಯಪ್ ಮತ್ತೆ ಕಾರ್ಯಾರಂಭ

Update: 2022-10-25 14:55 IST

ಹೊಸದಿಲ್ಲಿ: ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ವಾಟ್ಸ್ ಆ್ಯಪ್ ಮತ್ತೆ ಕಾರ್ಯಾರಂಭಿಸಿದೆ. ಜಗತ್ತಿನಾದ್ಯಂತ ವಾಟ್ಸ್ ಆ್ಯಪ್ ಬಳಕೆದಾರರು ಯಾವುದೇ ಮೆಸೇಜ್‌ ಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಾಗುತ್ತಿರಲಿಲ್ಲ. ಒಂದು ಗಂಟೆಗೂ ಅಧಿಕ ಸಮಯದ ಬಳಿಕ ವಾಟ್ಸ್ ಆ್ಯಪ್ ಮತ್ತೆ ಕಾರ್ಯಾರಂಭಿಸಿದೆ.

ಈ ಹಿಂದೆಯೂ ಕೆಲ ಬಾರಿ ವಾಟ್ಸ್ ಆ್ಯಪ್ ಸರ್ವರ್‌ ಡೌನ್‌ ಆಗಿದ್ದು, ಕೆಲ ಸಮಯಗಳ ಬಳಿಕ ಅದನ್ನು ಮರುಸ್ಥಾಪಿಸಲಾಗಿತ್ತು. #whatsappdown ಸದ್ಯ ಸಾಮಾಜಿಕ ತಾಣದಲಲಿ ಟ್ರೆಂಡಿಂಗ್‌ ಆಗಿದ್ದು, ಹಲವು ಟ್ವಿಟರ್‌ ಬಳಕೆದಾರರು ತಮಾಷೆಯ ಸಂದೇಶಗಳನ್ನು ಹಂಚಿಕೊಳ್ಳುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News