ಯಕ್ಷಗಾನ ಕಲಾರಂಗದ 2022ನೇ ಸಾಲಿನ ವಿವಿಧ ಪ್ರಶಸ್ತಿ ಪ್ರಕಟ

Update: 2022-10-25 14:12 GMT
ಬಿ.ಕೃಷ್ಣಸ್ವಾಮಿ ಜೋಯಿಸ್, ಡಿ.ಮನೋಹರ ಕುಮಾರ್, ಗಣಪತಿ ಭಟ್, ಮಹಮ್ಮದ್ ಗೌಸ್, ಯು.ಆನಂದ ಹಿರಿಯಡ್ಕ

ಉಡುಪಿ, ಅ.25: ಉಡುಪಿಯ ಯಕ್ಷಗಾನ ಕಲಾರಂಗ ಯಕ್ಷಗಾನ ಕ್ಷೇತ್ರದ ಸಾಧಕರಿಗೆ ಪ್ರತಿವರ್ಷ ವಿವಿಧ ಸಾಧಕರ ಹೆಸರಿನಲ್ಲಿ ನೀಡುವ ‘ಯಕ್ಷಗಾನ ಕಲಾರಂಗ ಪ್ರಶಸ್ತಿ-20022’ಕ್ಕೆ ಒಟ್ಟು 18 ಮಂದಿ ಹಿರಿಯ ಯಕ್ಷಗಾನ ಕಲಾವಿದರನ್ನು ಆಯ್ಕೆ ಮಾಡಲಾಗಿದೆ.

ಈ ಬಾರಿಯ ಪ್ರಶಸ್ತಿ ಪ್ರದಾನ ಸಮಾರಂಭ ನವೆಂಬರ್ 13ರ ರವಿವಾರ ಅಪರಾಹ್ನ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ. ಪ್ರತಿಯೊಂದು ಪ್ರಶಸ್ತಿಯೂ ತಲಾ 20,000ರೂ. ನಗದು ಹಾಗೂ ಪ್ರಶಸ್ತಿ ಪುರಸ್ಕಾರಗಳನ್ನು ಒಳಗೊಂಡಿರುತ್ತದೆ ಎಂದು ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.

ಪ್ರಶಸ್ತಿ ವಿಜೇತರ ವಿವರ ಹೀಗಿದೆ...

ಡಾ.ಬಿ.ಬಿ.ಶೆಟ್ಟಿ ಸ್ಮಾರಕ ಪ್ರಶಸ್ತಿ: ಡಿ.ಮನೋಹರ ಕುಮಾರ್ ಬಂಟ್ವಾಳ, ಪ್ರೊ.ಬಿ.ವಿ.ಆಚಾರ್ಯ ಸ್ಮಾರಕ ಪ್ರಶಸ್ತಿ: ಬಿ.ಕೃಷ್ಣಸ್ವಾಮಿ ಜೋಯಿಸ್ ಬ್ರಹ್ಮಾವರ, ನಿಟ್ಟೂರು ಸುಂದರ ಶೆಟ್ಟಿ-ಮಹೇಶ್ ಡಿ.ಶೆಟ್ಟಿ ಸ್ಮಾರಕ ಪ್ರಶಸ್ತಿ: ಮಲವಳ್ಳಿ ನಾರಾಯಣ ಭಟ್, ಯಲ್ಲಾಪುರ, ಬಿ.ಜಗಜ್ಜೀವನ್‌ದಾಸ್ ಶೆಟ್ಟಿ ಸ್ಮಾರಕ ಪ್ರಶಸ್ತಿ: ಎಸ್.ಅಣ್ಣಪ್ಪ ಕುಲಾಲ್ ಮಂದಾರ್ತಿ, ಕೆ.ವಿಶ್ವಜ್ಞ ಶೆಟ್ಟಿ ಸ್ಮಾರಕ ಪ್ರಶಸ್ತಿ: ರಾಮ ಜೋಗಿ ಜೋಡುಕಲ್ಲು ಕಾಸರಗೋಡು, ಕುತ್ಪಾಡಿ ಆನಂದ ಗಾಣಿಗ ಸ್ಮಾರಕ ಪ್ರಶಸ್ತಿ: ಮುಂಡ್ಕೂರು ಕೃಷ್ಣ ಶೆಟ್ಟಿ (ಕುಟ್ಟಿ ಶೆಟ್ಟಿ) ಬೆಳ್ತಂಗಡಿ.

ಭಾಗವತ ನಾರ್ಣಪ್ಪ ಉಪ್ಪೂರ ಸ್ಮಾರಕ ಪ್ರಶಸ್ತಿ: ಬಾಡ ಉಮೇಶ ಭಟ್, ಹೊನ್ನಾವರ, ದಶಾವತಾರಿ ಮಾರ್ವಿ ರಾಮಕೃಷ್ಣ ಹೆಬ್ಬಾರ್- ಭಾಗವತ ವಾದಿರಾಜ ಹೆಬ್ಬಾರ್ ಸ್ಮಾರಕ ಪ್ರಶಸ್ತಿ: ಐರ್‌ಬೈಲು ಆನಂದ ಶೆಟ್ಟಿ ಕುಂದಾಪುರ, ಶಿರಿಯಾರ ಮಂಜು ನಾಯ್ಕ್ ಸ್ಮಾರಕ ಪ್ರಶಸ್ತಿ: ಕೆ.ಮಹಮ್ಮದ್ ಗೌಸ್ ಕಾವ್ರಾಡಿ ಕುಂದಾಪುರ, ಕೋಟ ವೈಕುಂಠ ಸ್ಮಾರಕ ಪ್ರಶಸ್ತಿ: ಜೋಗು ಕುಲಾಲ ಕಟ್ಟಾಡಿ ಕುಂದಾಪುರ, ಪಡಾರು ನರಸಿಂಹ ಶಾಸ್ತ್ರಿ ಸ್ಮಾರಕ ಪ್ರಶಸ್ತಿ: ಎಸ್.ವೆಂಕಟಪ್ಪ ಆಚಾರ್ಯ ಕಳಸ ಚಿಕ್ಕಮಗಳೂರು.

ಕಡಿಯಾಳಿ ಸುಬ್ರಾಯ ಉಪಾಧ್ಯ ಸ್ಮಾರಕ ಪ್ರಶಸ್ತಿ: ಬಿ.ಕೆ.ಚಿನ್ನಪಬ್ಪ ಗೌಡ ಸಜಿಪ ಬಂಟ್ವಾಳ, ಮಲ್ಪೆ ಶಂಕರ ನಾರಾಯಣ ಸಾಮಗ ಸ್ಮಾರಕ ಪ್ರಶಸ್ತಿ: ಎಂ. ಲಕ್ಷ್ಮೀಶ ಅಮ್ಮಣ್ಣಾಯ ಬೆಳ್ತಂಗಡಿ, ಐರೋಡಿ ರಾಮ ಗಾಣಿಗ ಸ್ಮಾರಕ ಪ್ರಶಸ್ತಿ: ವಿದ್ವಾನ್ ಗಣಪತಿ ಭಟ್ ಯಲ್ಲಾಪುರ, ಎಂ.ತಿಮ್ಮಯ್ಯ ಸ್ಮಾರಕ ಪ್ರಶಸ್ತಿ: ಕೂಟೇಉ ಬಾಲಕೃಷ್ಣ ಭಟ್ ಮಂಜೇಶ್ವರ, ಎಚ್.ಪಿ.ಐತಾಳ್ ಸ್ಮಾರಕ ಪ್ರಶಸ್ತಿ: ಎಂ. ನಿತ್ಯಾನಂದ ಹೆಬ್ಬಾರ್ ಹೊಸನಗರ ಶಿವಮೊಗ್ಗ.

ಕೋಳ್ಯೂರು ರಾಮಚಂದ್ರ ರಾವ್ ಗೌರವಾರ್ಥ ಪ್ರಶಸ್ತಿ: ಯು.ಆನಂದ ಹಿರಿಯಡಕ, ಶ್ರೀಮತಿ ಪ್ರಭಾವತಿ ವಿ.ಶೆಣೈ, ಯು.ವಿಶ್ವನಾಥ್ ಶೆಣೈ ಗೌರವಾರ್ಥ ಪ್ರಶಸ್ತಿ: ಶಿವರಾಮ ಪಣಂಬೂರು ಮಂಗಳೂರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News