ಡೆಂಗ್ಯೂ ರೋಗಿಗೆ ʼಮುಸಂಬಿ ಜ್ಯೂಸ್ʼ ಚುಚ್ಚಿದ್ದ ಉತ್ತರಪ್ರದೇಶದ ಆಸ್ಪತ್ರೆ ನೆಲಸಮಗೊಳ್ಳುವ ಸಾಧ್ಯತೆ
ಪ್ರಯಾಗರಾಜ್: ಡೆಂಗ್ಯೂ ರೋಗಿಗೆ ರಕ್ತದ ಪ್ಲೇಟ್‌ಲೆಟ್‌ಗಳ ಬದಲಿಗೆ ಮುಸಂಬಿ ರಸವನ್ನು ಚುಚ್ಚಿದ್ದ ಆರೋಪದ ಮೇಲೆ ತೀವ್ರ ಟೀಕೆಗೆ ಒಳಗಾದ ಕೆಲವು ದಿನಗಳ ನಂತರ, ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿರುವ ಖಾಸಗಿ ಒಡೆತನದ ಗ್ಲೋಬಲ್ ಆಸ್ಪತ್ರೆ ಮತ್ತು ಟ್ರಾಮಾ ಸೆಂಟರ್ ನೆಲಸಮವಾಗುವ ಸಾಧ್ಯತೆಯಿದೆ ಎಂದು indianexpress.com ವರದಿ ಮಾಡಿದೆ.
ಪ್ರಯಾಗರಾಜ್ ಅಭಿವೃದ್ಧಿ ಪ್ರಾಧಿಕಾರವು ಆಸ್ಪತ್ರೆಗೆ ನೋಟಿಸ್ ಜಾರಿ ಮಾಡಿದೆ ಮತ್ತು ಆಡಳಿತದಿಂದ ಉತ್ತರವನ್ನು ಕೇಳಿದೆ. ಕಟ್ಟಡವನ್ನು "ಕಾನೂನುಬಾಹಿರವಾಗಿ ನಿರ್ಮಿಸಲಾಗಿದೆ" ಎಂದು ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದ್ದು, ಅಕ್ಟೋಬರ್ 28 ರೊಳಗೆ ಆಸ್ಪತ್ರೆಯ ಆಡಳಿತವನ್ನು ಅಲ್ಲಿಂದ ತೆರವುಗೊಳಿಸುವಂತೆ ನಿರ್ದೇಶಿಸಿದೆ ಎಂದು ANI ವರದಿ ಮಾಡಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರದೀಪ್ ಪಾಂಡೆ ಎಂಬ 32 ವರ್ಷದ ಡೆಂಗ್ಯೂ ರೋಗಿಯ ಸಾವಿನ ನಂತರ ಈ ಘಟನೆ ನಡೆದಿದೆ. “ನನ್ನ ಸೋದರ ಮಾವನಿಗೆ ಪ್ಲೇಟ್‌ಲೆಟ್‌ಗಳ ಬದಲು ನೀಡಿದ್ದು ಮುಸಂಬಿ ಜ್ಯೂಸ್. ನನ್ನ ಬಳಿ ಜ್ಯೂಸ್ ಇರುವ ಐದನೇ ಪ್ಯಾಕೆಟ್ ಇದೆ. ಅದನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡುತ್ತೇನೆ’ ಎಂದು ಸಂತ್ರಸ್ತೆಯ ಸೋದರ ಮಾವ ಆರೋಪಿಸಿದ್ದಾರೆ.
ಸಂತ್ರಸ್ತೆಯ ಕುಟುಂಬದ ಆರೋಪಗಳನ್ನು ತನಿಖೆ ಮಾಡಲು ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ ಎಂದು ಪ್ರಯಾಗರಾಜ್ ಸಿಎಂಒ ನಾನಕ್ ಸರನ್ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.
“ತನಿಖೆ ನಡೆಯುತ್ತಿದೆ. ಕುಟುಂಬದವರು ಕೆಲವು ಆರೋಪಗಳನ್ನು ಮಾಡಿದ್ದಾರೆ. ರೋಗಿಗೆ ಮೂರು ಯೂನಿಟ್ ಪ್ಲೇಟ್‌ಲೆಟ್ ನೀಡುವವರೆಗೆ ಯಾವುದೇ ಸಮಸ್ಯೆ ಇರಲಿಲ್ಲ ಎಂದು ಅವರು ಹೇಳಿದರು. ನಂತರ ಅವರು ಆಸ್ಪತ್ರೆಯಲ್ಲಿ ಇನ್ನೊಬ್ಬರ ಮೂಲಕ ಕೆಲವು ಪ್ಲೇಟ್‌ಲೆಟ್ ಳನ್ನು ಪಡೆದ ನಂತರ ರೋಗಿಯ ಸ್ಥಿತಿ ಹದಗೆಟ್ಟಿತು. ಮರುದಿನ ರೋಗಿ ಮೃತಪಟ್ಟರು ”ಎಂದು ಅವರು ಹೇಳಿದ್ದಾರೆ.