×
Ad

ರಿಶಿ ಸುನಕ್‌ ಎಂದು ಕ್ರಿಕೆಟಿಗ ಆಶಿಶ್‌ ನೆಹ್ರಾ ಫೋಟೊ ಶೇರ್ ಮಾಡಿ ನಗೆಪಾಟಲಿಗೀಡಾದ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ !

Update: 2022-10-26 18:42 IST

Kids : Let me Photoshop Rishi Sunak's pic with Modi ji
Legends : Uski kya zarurat hai, Nehra ki chipka deta hun, Inko kya hi pata chalega. pic.twitter.com/1v1O36t0r2

— Mohammed Zubair (@zoo_bear) October 25, 2022

ಹೊಸದಿಲ್ಲಿ: ಬ್ರಿಟನ್‌ನ ಮಾಜಿ ಪ್ರಧಾನಿ ಡೇವಿಡ್‌ ಕ್ಯಾಮರೂನ್‌ (David Cameron) ಅವರೊಂದಿಗೆ ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ (Narendra Modi) ಮಾತುಕತೆ ನಡೆಸುತ್ತಿರುವ ಚಿತ್ರವೊಂದನ್ನು ತಿರುಚಿ ಮೋದಿ ಅವರು ನೂತನ ಬ್ರಿಟಿಷ್‌ ಪ್ರಧಾನಿ ರಿಷಿ ಸುನಕ್‌ (Rishi Sunak) ಅವರ ಜೊತೆಗೆ ಮಾತನಾಡುತ್ತಿದ್ದಾರೆಂಬಂತೆ ಬಿಂಬಿಸಲು ಹೋಗಿ ಬಿಜೆಪಿಯ ಒಬಿಸಿ ಘಟಕದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ ಪಾರ್ಥಸಾರಥಿ ಪೇಚಿಗೀಡಾಗಿದ್ದಾರಲ್ಲದೆ ಸಾಮಾಜಿಕ ಜಾಲತಾಣಿಗರಿಂದ  ಟ್ರೋಲ್‌ಗೊಳಗಾಗಿದ್ದಾರೆ.

ತಮ್ಮ ಟ್ವೀಟ್‌ನಲ್ಲಿ ಪಾರ್ಥಸಾರಥಿ ಅವರು ನಾಲ್ಕು ಫೋಟೋಗಳನ್ನು ಶೇರ್‌ ಮಾಡಿದ್ದರು. ಅವುಗಳಲ್ಲಿ ಮೂರು ಫೋಟೋಗಳು ರಿಷಿ ಸುನಕ್‌ ಅವರ ಕುರಿತಾಗಿದ್ದರೆ ನಾಲ್ಕನೆಯದನ್ನು ಪ್ರಧಾನಿ ಮೋದಿ ಅವರು ರಿಷಿ ಸುನಕ್‌ ಅವರೊಂದಿಗೆ ಮಾತನಾಡುತ್ತಿರುವುದು ಎಂದು ತೋರಿಸುವ ಭರದಲ್ಲಿ ಸುನಕ್‌ ಬದಲು ಮಾಜಿ ಕ್ರಿಕೆಟಿಗ ಆಶಿಷ್‌ ನೆಹ್ರಾ ಚಿತ್ರ ಅಂಟಿಸಲಾಗಿತ್ತು. ಈ ಮೂಲ ಚಿತ್ರವು ಪ್ರಧಾನಿ ಮೋದಿ ಲಂಡನ್‌ ಭೇಟಿ ವೇಳೆ ಕ್ಯಾಮರೂನ್‌ ಜೊತೆಗೆ ಮಾತನಾಡುವಾಗ ನವೆಂಬರ್‌ 2015 ರಲ್ಲಿ ತೆಗೆಯಲಾಗಿತ್ತು. ಈ ಚಿತ್ರ ವೆಬ್‌ ತಾಣ ಅಲಾರ್ಮಿ.ಕಾಂ ನಲ್ಲಿ ಲಭ್ಯವಿದೆ.

"ಈ ದೀಪಾವಳಿ ತುಂಬಾ ವಿಶೇಷ. ಅಯ್ಯೋಧ್ಯೆಯಲ್ಲಿ ಮಾತ್ರವಲ್ಲದೆ, ದೀಪೋತ್ಸವದ ಇತಿಹಾಸವನ್ನು ಬ್ರಿಟನ್‌ನಲ್ಲೂ ಬರೆಯಲಾಗುತ್ತಿದೆ. ಭಾರತೀಯ ಮೂಲದ ರಿಷಿ ಸುನಕ್‌ ಅವರು ಬ್ರಿಟನ್‌ ಪ್ರಧಾನಿ ಆಗುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಅವರಿಗೆ ಶುಭಾಶಯಗಳು,ʼʼ ಎಂದು ಪಾರ್ಥಸಾರಥಿ ಟ್ವೀಟ್‌ ಮಾಡಿದ್ದರು.

ನಂತರ ತಮ್ಮ ಫೋಟೋ ಪ್ರಮಾದ ಅರಿವಾಗಿ ಪಾರ್ಥಸಾರಥಿ ತಮ್ಮ ಟ್ವೀಟ್‌ ಡಿಲೀಟ್‌ ಮಾಡಿದ್ದರೂ ಹಲವರು ಅದಾಗಲೇ ಅದನ್ನು ಸೇವ್‌ ಮಾಡಿಕೊಂಡಿದ್ದರು. ಆಲ್ಟ್‌ ನ್ಯೂಸ್‌ ಸಹಸ್ಥಾಪಕ ಮೊಹಮ್ಮದ್‌ ಝುಬೈರ್‌ ಕೂಡ ಬಿಜೆಪಿ ನಾಯಕನ ಪ್ರಮಾದವನ್ನು ತೋರಿಸಿದ್ದಾರೆ  ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ: ಬೆಳಗಾವಿ: ಕಲುಷಿತ ನೀರು ಕುಡಿದು 50ಕ್ಕೂ ಹೆಚ್ಚು ಜನ ಅಸ್ವಸ್ಥ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News