ಗುಜರಿ ವಿಲೇವಾರಿಯಿಂದ ಸರಕಾರಕ್ಕೆ ರೂ. 254.21 ಕೋಟಿ ಆದಾಯ

Update: 2022-10-26 15:41 GMT
ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಗುಜರಿ (scrap) ವಿಲೇವಾರಿಯಿಂದ ಸರಕಾರ ರೂ. 254.21 ಕೋಟಿ ಗಳಿಸಿದೆ ಎಂದು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ನಿವಾರಣೆ ಮತ್ತು ಪಿಂಚಣಿ ಸಚಿವ ಜಿತೇಂದ್ರ ಸಿಂಗ್ (Jitendra Singh) ಮಂಗಳವಾರ ಹೇಳಿದ್ದಾರೆ. ಎಲ್ಲಾ ಸರಕಾರಿ ಕಚೇರಿಗಳಲ್ಲಿ ಆಯೋಜಿಸಲಾದ ಮೂರು ವಾರಗಳ ವಿಶೇಷ ಅಭಿಯಾನ 2.20 ಪ್ರಗತಿಯನ್ನು ಅವಲೋಕಿಸಿದ ಸಂದರ್ಭ ಸಚಿವರು ಈ ಮಾಹಿತಿ ನೀಡಿದ್ದಾರೆ.

ಈ ಅಭಿಯಾನದಂಗವಾಗಿ ಸಾರ್ವಜನಿಕರ 3,05,268 ಅಹವಾಲುಗಳನ್ನು ಪರಿಹರಿಸಲಾಗಿದೆ  ಎಂದು ಸಚಿವರು ತಿಳಿಸಿದರು.

ಗುಜರಿ ಮಾರಾಟದಿಂದ ದೊರೆತ ಆದಾಯದ ಗರಿಷ್ಠ ಭಾಗ ರಕ್ಷಣಾ ಸಚಿವಾಲಯದಿಂದ (ಶೇ 60) ಬಂದಿದೆ. ಆದರೆ ರೈಲ್ವೆ ಇಲಾಖೆ ಈ ನಿಟ್ಟಿನಲ್ಲಿ ಇನ್ನಷ್ಟೇ ತನ್ನ ಅಂಕಿಸಂಖ್ಯೆ ನೀಡಬೇಕಿದೆ. ರೈಲ್ವೇ ಇಲಾಖೆಯೂ ಈ ಗುಜರಿ ವಿಲೇವಾರಿ ನೀತಿಯಲ್ಲಿ ಮಹತ್ತರ ಪಾತ್ರ ವಹಿಸಿರುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News