ಅ.30ಕ್ಕೆ ಉಡುಪಿಯಲ್ಲಿ ಪಾವೆಂ ಆಚಾರ್ಯ ಸಂಸ್ಮರಣೆ
Update: 2022-10-26 21:32 IST
ಉಡುಪಿ, ಅ.26: ಉಡುಪಿಯ ಸಾಂಸ್ಕೃತಿಕ ಸಂಘಟನೆ ರಥಬೀದಿ ಗೆಳೆಯರು ಹಾಗೂ ಪಾವೆಂ ಆಚಾರ್ಯ ಟ್ರಸ್ಟ್ ಬೆಂಗಳೂರು ಇವರ ಆಶ್ರಯದಲ್ಲಿ ಇದೇ ಅ.30ರ ಸಂಜೆ 4 ಗಂಟೆಗೆ ಉಡುಪಿ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಗೃಹದಲ್ಲಿ ಖ್ಯಾತ ಸಾಹಿತಿ ಪಾವೆಂ ಆಚಾರ್ಯ ಸಂಸ್ಮರಣಾ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ನಾಡಿನ ಖ್ಯಾತ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಅವರು ವಿಶೇಷ ಉಪನ್ಯಾಸ ನೀಡಿದ್ದಾರೆ. ಆಸಕ್ತರು ಇದರಲ್ಲಿ ಭಾಗವಹಿಸುವಂತೆ ರಥಬೀದಿ ಗೆಳೆಯರು ಸಂಸ್ಥೆಯ ಕಾರ್ಯದರ್ಶಿ ಪ್ರೊ.ಸುಬ್ರಹ್ಮಣ್ಯ ಜೋಶಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.