×
Ad

ಬ್ರಹ್ಮಾವರ: ರುಡ್‌ಸೆಟ್‌ನಲ್ಲಿ ವಿವಿಧ ತರಬೇತಿ

Update: 2022-10-28 22:54 IST

ಉಡುಪಿ, ಅ.28: ರುಡ್‌ಸೆಟ್ ಸಂಸ್ಥೆಯ ವತಿಯಿಂದ ಸ್ವ ಉದ್ಯೋಗಾಕಾಂಕ್ಷಿ ಗಳಿಗೆ ಕಂಪ್ಯೂಟರೈಸ್ಡ್‌ ಅಕೌಂಟಿಂಗ್, ದ್ವಿಚಕ್ರ ವಾಹನ ರಿಪೇರಿ, ಟಿವಿ ರಿಪೇರಿ, ಹೈನುಗಾರಿಕೆ ಮತ್ತು ಎರೆಹುಳ ಗೊಬ್ಬರ ತಯಾರಿಕೆ, ಕೃಷಿ ಉದ್ಯಮ, ಸೆಣಬು ಉತ್ಪನ್ನಗಳ ತಯಾರಿಕೆ, ಪೇಪರ್ ಹಾಗೂ ಕವರ್ ಬಟ್ಟೆ ಬ್ಯಾಗ್ ತಯಾರಿಕೆ, ಸಿಸಿ ಟಿವಿ ಅಳವಡಿಕೆ ಮತ್ತು ರಿಪೇರಿ, ಕ್ಯಾಂಡಲ್ ಹಾಗೂ ಕೃತಕ ಆಭರಣಗಳ ತಯಾರಿಕೆಗೆ ತರಬೇತಿ ನೀಡಲಾಗುವುದು. 

18ರಿಂದ 45 ವರ್ಷ ವಯಸ್ಸಿನ ಆಸಕ್ತರು ತಮ್ಮ ಹೆಸರು, ವಿಳಾಸದ ಜೊತೆಗೆ ರೇಷನ್ ಹಾಗೂ ಆಧಾರ್ ಕಾರ್ಡ್ ಫೋಟೋ ಪ್ರತಿಯನ್ನು 9591233748, 9611544930, 9448348569, 9844086383, 9632561145, 8861325564 ನಂಬರ್‌ಗೆ ವಾಟ್ಸಾಪ್ ಮೂಲಕ ಕಳುಹಿಸಿಕೊಡಬಹುದು.

ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್: -www.rudsetitraining.org- ಅಥವಾ ಇಮೇಲ್ ವಿಳಾಸ - rudbvr@gmIl.com- ಅಥವಾ ರುಡ್‌ಸೆಟ್ ಸಂಸ್ಥೆ, 52ನೇ ಹೇರೂರು, ಬ್ರಹ್ಮಾವರ ಇವರನ್ನು ಸಂಪರ್ಕಿ ಸುವಂತೆ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

Similar News