×
Ad

ಹೈದರಾಬಾದ್: ಕಾರಿನಿಂದ 70 ಲಕ್ಷ ರೂ. ವಶ; ಎಬಿವಿಪಿ ನಾಯಕ ಸಹಿತ ಇಬ್ಬರ ಬಂಧನ

Update: 2022-10-28 23:20 IST

ಹೈದರಾಬಾದ್, ಅ. 28:  ಹೈದರಾಬಾದ್‌ನ ಬಂಜಾರ ಹಿಲ್‌ನಲ್ಲಿ ಕಾರೊಂದರಿಂದ ಪೊಲೀಸರು ಗುರುವಾರ ಲೆಕ್ಕ ರಹಿತ 70 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ. 

ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಹಾಗೂ ಕಾರಿನಲ್ಲಿ ಕೊಂಡೊಯ್ಯುತ್ತಿದ್ದ ನಗದಿನ ಬಗ್ಗೆ ಸಮರ್ಪಕ ಉತ್ತರ ನೀಡದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. 

ಬಂಧಿಸಲಾದ ಇಬ್ಬರನ್ನು ಹೈದರಾಬಾದ್‌ನ ನಿಝಾಮ್ ಕಾಲೇಜಿನ ಕಾಮರ್ಸ್‌ನ ಸಹಾಯಕ ಪ್ರಾಧ್ಯಾಪಕ ಹಾಗೂ ಎಬಿವಿಪಿಯ ಮಾಜಿ ವಲಯ ಉಸ್ತುವಾರಿ ಪಿ. ಕಿಷನ್ ರಾವ್ (38) ಹಾಗೂ ಆರ್ಟ್ ಸ್ಟುಡಿಯೊ ಒಂದರ ಮ್ಯಾನೇಜರ್ ವೇಮುಲ ವಂಶಿ (26) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಇದರೊಂದಿಗೆ ಸೆಪ್ಟಂಬರ್ ಅಂತ್ಯದ ವರೆಗೆ ಸುಮಾರು 12.66 ಕೋಟಿ ರೂಪಾಯಿ ವಶಪಡಿಸಿಕೊಳ್ಳಲಾಗಿದೆ ಹಾಗೂ ಕನಿಷ್ಠ 9 ಸಂದರ್ಭಗಳಲ್ಲಿ ಲೆಕ್ಕ ರಹಿತ ನಗದು ಸಾಗಾಟ ಆರೋಪದಲ್ಲಿ 31 ಮಂದಿಯನ್ನು ಬಂಧಿಸಲಾಗಿದೆ   ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.  

Similar News