ಮಾದಕ ದ್ರವ್ಯ ಪ್ರಕರಣ: ಕಾಮೆಡಿಯನ್ ಭಾರತಿ ಸಿಂಗ್, ಪತಿಯ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ

Update: 2022-10-29 13:19 GMT

ಮುಂಬೈ,ಅ.29: ಎನ್ಸಿಬಿಯ ಮುಂಬೈ (Mumbai)ಘಟಕವು 2020ರ ಮಾದಕ ದ್ರವ್ಯ ಪ್ರಕರಣದಲ್ಲಿ ಕಾಮೆಡಿಯನ್ ಭಾರತಿ ಸಿಂಗ್(Bharti Singh) ಮತ್ತು ಅವರ ಪತಿ ಹರ್ಷ ಲಿಂಬಾಚಿಯಾ (Harsha Limbachia)ವಿರುದ್ಧ ಇಲ್ಲಿಯ ನ್ಯಾಯಾಲಯದಲ್ಲಿ 200 ಪುಟಗಳ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದೆ.

 2020 ನವಂಬರ್ನಲ್ಲಿ ಭಾರತಿ ಸಿಂಗ್ ಅವರ ನಿರ್ಮಾಣ ಸಂಸ್ಥೆಯ ಕಚೇರಿ ಮತ್ತು ನಿವಾಸದ ಮೇಲೆ ದಾಳಿ ನಡೆಸಿ 86.5 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದ ಎನ್ಸಿಬಿ ಸಿಂಗ್ ಮತ್ತು ಲಿಂಬಾಚಿಯಾ ಅವರನ್ನು ಬಂಧಿಸಿತ್ತು. ಬಳಿಕ ವಿಶೇಷ (ಮಾದಕ ದ್ರವ್ಯ) ನ್ಯಾಯಾಲಯವು ಅವರಿಗೆ ಜಾಮೀನು ಮಂಜೂರು ಮಾಡಿತ್ತು.

ಸಿಂಗ್ ಮತ್ತು ಲಿಂಬಾಚಿಯಾ ಗಾಂಜಾ ಸೇವಿಸಿದ್ದನ್ನು ಒಪ್ಪಿಕೊಂಡಿದ್ದಾರೆ ಎಂದು ಎನ್ಸಿಬಿ ಅಧಿಕಾರಿಯೋರ್ವರು ಆಗ ತಿಳಿಸಿದ್ದರು.

Similar News